ನ.29ಕ್ಕೆ ಹೆಳವನಕಟ್ಟೆ ಲಕ್ಷ್ಮಿ ರಂಗನಾಥ ಸ್ವಾಮಿ ಕೆರೆಯಲ್ಲಿ ತೆಪ್ಪೋತ್ಸವ

ನ.29ಕ್ಕೆ ಹೆಳವನಕಟ್ಟೆ ಲಕ್ಷ್ಮಿ ರಂಗನಾಥ ಸ್ವಾಮಿ ಕೆರೆಯಲ್ಲಿ ತೆಪ್ಪೋತ್ಸವ

ಮಲೇಬೆನ್ನೂರು, ಅ.23- ಭರ್ತಿಯಾಗಿ ಕೋಡಿ ಬಿದ್ದಿರುವ ಕೊಮಾರನಹಳ್ಳಿಯ ಹೆಳವನಕಟ್ಟೆ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಯ ಐತಿಹಾಸಿಕ ಕೆರೆಯಲ್ಲಿ ಬರುವ ನವೆಂಬರ್ 29 ರಂದು ಅದ್ಧೂರಿಯಾಗಿ ತೆಪ್ಪೋತ್ಸವ ಆಚರಿಸಲು ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.

ತೆಪ್ಪೋತ್ಸವ ಆಚರಿಸುವ ಕುರಿತು ಕೊಮಾರನಹಳ್ಳಿ ಗ್ರಾಮದ ಶ್ರೀ ಲಕ್ಷ್ಮಿ ರಂಗನಾಥ ಸಮುದಾಯ ಭವನದಲ್ಲಿ ಬುಧವಾರ ಕರೆದಿದ್ದ ಕೊಮಾರನಹಳ್ಳಿ ಗ್ರಾಮಸ್ಥರ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಗ್ರಾಮಸ್ಥರ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು.

ನ.29ರ ಸಂಜೆ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಮತ್ತು ಕೆರೆಯಲ್ಲಿ ತೆಪ್ಪೋತ್ಸವ ಸೇರಿದಂತೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಸುರೇಶ್ ಶಾಸ್ತ್ರಿ ತಿಳಿಸಿದರು.

ಈ ವಿಶೇಷ ಕಾರ್ಯಕ್ರಮಕ್ಕೆ ಕೊಮಾರನಹಳ್ಳಿ, ಮಲೇಬೆ ನ್ನೂರು, ಹಾಲಿವಾಣ, ಹರಳಹಳ್ಳಿ, ದಿಬ್ದಹಳ್ಳಿ, ಕೊಪ್ಪ, ಯಕ್ಕನ ಹಳ್ಳಿ, ತಿಮ್ಲಾಪುರ ಸೇರಿದಂತೆ ಮತ್ತಿತರೆ ಗ್ರಾಮಗಳಿಂದ ದೇವರು ಗಳನ್ನು ಕರೆತರುವ ಬಗ್ಗೆ ತೀರ್ಮಾನಿಸಲಾಗಿದೆ. ತೆಪ್ಪೋತ್ಸವಕ್ಕೆ 15 ರಿಂದ 20 ಲಕ್ಷ ರೂ. ಅಂದಾಜು ಖರ್ಚು ಬರಬಹುದು. ಇದರಲ್ಲೇ ಅನ್ನ ಸಂತರ್ಪಣೆ ಸೇರಿದಂತೆ ಎಲ್ಲವನ್ನೂ ಒಳಗೊಂಡಿರುತ್ತದೆ ಎಂದು ಸುರೇಶ್ ಶಾಸ್ತ್ರಿ ವಿವರಿಸಿದರು.

ಗ್ರಾಮದ ರಾಮಣ್ಣ ಸ್ವಾಮಿ ಅವರು, 2009ರಲ್ಲಿ ತೆಪ್ಪೋತ್ಸವ ಆಚರಣೆ ಮಾಡಿದಾಗ 85 ಸಾವಿರ ರೂ.ಗಳು ಉಳಿದಿತ್ತು. ಈಗ ಆ ಹಣ 1.45 ಲಕ್ಷ ರೂ.ಗಳಾಗಿವೆ. ಈ ವರ್ಷದ ತೆಪ್ಪೋತ್ಸವಕ್ಕೆ ಸುಮಾರು 20 ಸಾವಿರ ಜನ ಸೇರುವ ನಿರೀಕ್ಷೆಯಿದ್ದು, ವೈಭವದಿಂದ ಉತ್ಸವ ಆಚರಿಸೋಣ ಎಂದರು.

ಕೆರೆ ಸುತ್ತಲು ವಿದ್ಯುತ್ ಅಲಂಕಾರ, ತೆಪ್ಪೋತ್ಸವ ಕುರಿತು ಎಲ್ಲಾ ಕಡೆಗಳಲ್ಲಿ ಫ್ಲೆಕ್ಸ್ ಹಾಕಿಸಬೇಕೆಂದು ಗ್ರಾಮದ ಐರಣಿ ಮಹೇಶ್ವರಪ್ಪ ಹೇಳಿದರು. ಗ್ರಾಮದ ಐರಣಿ ಅಣ್ಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲಿದ್ದ ಅನೇಕರು ದವಸ – ಧಾನ್ಯ, ಹಣ ನೀಡುವ ಭರವಸೆ ನೀಡಿದರು.

ಹಾಲಿವಾಣದ ಎಸ್.ಜಿ.ಪರಮೇಶ್ವರಪ್ಪ, ಹನಗವಾಡಿ ವೀರೇಶ್, ಹಿಂಡಸಘಟ್ಟ ಲಿಂಗರಾಜ್, ಮಲೇಬೆನ್ನೂರಿನ ಮುದೇಗೌಡ್ರ ತಿಪ್ಪೇಶ್, ಕೆ.ಜಿ.ಪರಮೇಶ್ವರಪ್ಪ, ಬೆಣ್ಣೆಹಳ್ಳಿ ಸಿದ್ದೇಶ್, ಪಿ.ಆರ್.ರಾಜು, ಉಡೇದರ್ ಸಿದ್ದೇಶ್, ಬಟ್ಟೆ ಅಂಗಡಿ ವಿಶ್ವ, ಎ.ಕೆ.ಲೋಕೇಶ್, ಬೆಣ್ಣೆಹಳ್ಳಿ ಬಸವರಾಜ್, ಹರಳಹಳ್ಳಿ ಶ್ರೀನಿವಾಸ್, ಗ್ರಾಮದ ಮಡಿವಾಳರ ಬಸವರಾಜ್, ಹನುಮಂತು, ಐ.ಪಿ.ರಂಗನಾಥ್, ಎಸ್.ಡಿ.ರಂಗನಾಥ್, ಎಸ್.ಹೆಚ್.ಹಾಲೇಶ್, ಹೋಟೆಲ್ ಪರಮೇಶ್ವರಪ್ಪ, ಐರಣಿ ಮೂರ್ತಿ, ಗಿರಳ್ಳಿ ರಾಜಪ್ಪ, ಸಿ.ರಂಗಣ್ಣ, ದಾನಪ್ಳ ಅರುಣ್, ಪರಮೇಶ್ ನಾಯ್ಕ, ಯು.ನಾಗಪ್ಪ, ಪಿಗ್ಮಿ ರಾಮಣ್ಣ, ದೇವಸ್ಥಾನದ ಧರ್ಮಾಚಾರ್, ದಿಬ್ದಹಳ್ಳಿಯ ಬಸಪ್ಪಗೌಡ್ರು, ಹಾಲಿವಾಣದ ಮೋಹನ್, ಚಿಕ್ಕಣ್ಣ, ಸಂತೋಷ್, ಹನುಮಗೌಡ, ಕೊಪ್ಪದ ಚಂದ್ರಪ್ಪ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.

error: Content is protected !!