ದಾವಣಗೆರೆ, ಅ. 23 – ಬಿಜಾಪುರ ಜಿಲ್ಲೆಯ ತಾಂಬಾದಲ್ಲಿ ಅ. 5 ಮತ್ತು 6 ರಂದು ನಡೆದ ರಾಜ್ಯ ಮಟ್ಟದ ಆಹ್ವಾನಿತ ಖೋ-ಖೋ ಪಂದ್ಯಾವಳಿಯಲ್ಲಿ ನಗರದ ಕ್ರೀಡಾ ವಸತಿ ನಿಲಯದ ಪುರುಷರ ತಂಡವು ದ್ವಿತೀಯ ಸ್ಥಾನ ಪಡೆಯಿತು. ತಂಡದಿಂದ ವಿಜಯ್, ಹುಲುಗಪ್ಪ, ನಿಖಿಲ್, ವಿರೇಶ್, ರವಿಕುಮಾರ್, ಭೀಮಪ್ಪ, ಪ್ರದೀಪ್, ಮಲ್ಲಿಕಾರ್ಜುನ, ಯಮನಪ್ಪ, ಪ್ರಜ್ವಲ್, ಪುನೀತ್, ದಿಲೀಪ್ ಇವರುಗಳು ಉತ್ತಮ ಪ್ರದರ್ಶನ ನೀಡಿದರು.
ಕ್ರೀಡಾ ವಸತಿ ನಿಲಯದ ಖೋ-ಖೋ ತಂಡಕ್ಕೆ ದ್ವಿತೀಯ ಸ್ಥಾನ
