ದಾವಣಗೆರೆ, ಅ.23- ನಗರದ ಸ್ನೇಹ ಮಹಿಳಾ ಬಳಗದ ವತಿಯಿಂದ ದಸರಾ ಹಬ್ಬವನ್ನು ಆಚರಿಸಲಾಯಿತು.
ಜಗನ್ನಾಥ್ ನಾಡಿಗೇರ್ ಮುಖ್ಯ ಅತಿಥಿಗಳಾಗಿ ಆಗಮಿಸಿ ನವರಾತ್ರಿ ಹಬ್ಬದ ಬಗ್ಗೆ ಅರ್ಥಪೂರ್ಣವಾದ ವಿವರಣೆ ನೀಡಿದರು. ಸ್ನೇಹ ಮಹಿಳಾ ಬಳಗದ ಗೌರವಾಧ್ಯಕ್ಷರಾದ ಶ್ರೀಮತಿ ಮಂಜುಳಾ ಬಸವಲಿಂಗಪ್ಪ, ಮಂಜುಳಾ ನಿಂಗಪ್ಪ, ಶೋಭಾ ರವಿ, ನಾಗರತ್ನ, ತುಳಸಿ, ಉಮಾ, ಕವಿತ, ನೇತ್ರ, ಚೇತನ, ನರ್ಮದ, ರೇಖಾ, ಲೀಲಾ, ಅನ್ನಪೂರ್ಣ, ಪುಷ್ಪ, ಜಯಶ್ರೀ, ಸುವರ್ಣ, ಮಮತಾ ಮುಂತಾದವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.