ನಗರದ ಸ್ಪರ್ಶ್ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಕೌಶಲ್ಯ ವೃತ್ತಿ ತರಬೇತಿ

ನಗರದ ಸ್ಪರ್ಶ್ ಆಸ್ಪತ್ರೆಯಲ್ಲಿ  ತುರ್ತು ಚಿಕಿತ್ಸೆ ಕೌಶಲ್ಯ ವೃತ್ತಿ ತರಬೇತಿ

ದಾವಣಗೆರೆ, ಅ.23- ಸ್ಪರ್ಶ್ ಆಸ್ಪತ್ರೆ (ಬೆಂಗಳೂರು) ಹಾಗೂ ಎಸ್‌ಎಸ್‌ಐಎಂಎಸ್ ಸ್ಪರ್ಶ್ ಆಸ್ಪತ್ರೆ (ದಾವಣಗೆರೆ) ಇವರ ಆಶ್ರಯದಲ್ಲಿ ನಗರದ ಎಸ್‌.ಎಸ್.ವೈದ್ಯಕೀಯ ಮಹಾವಿದ್ಯಾಲಯದಲ್ಲಿ ತುರ್ತು ಚಿಕಿತ್ಸೆಯ ಕೌಶಲ್ಯ ವೃದ್ಧಿ ತರಬೇತಿ ಹಮ್ಮಿಕೊಳ್ಳಲಾಗಿತ್ತು.

ಕಾಲೇಜಿನ ಪ್ರಾಚಾರ್ಯ ಡಾ. ಬಿ.ಎಸ್.ಪ್ರಸಾದ್, ಅಧೀಕ್ಷಕ ಡಾ.ಅರುಣ್ ಕುಮಾರ್ ಅಜ್ಜಪ್ಪ, ಡಾ. ಜೆ.ಮಂಜುನಾಥ್, ಡಾ. ಎಂ.ವೆಂಕಟರಮಣರಾವ್, ಡಾ.ಶ್ರೀನಾಥ್ ಕುಮಾರ್, ಡಾ.ನರೇಂದ್ರ, ಡಾ.ನಾಗನಿಶ್ಚಲ್, ಡಾ.ಪ್ರಣೀತ ರೆಡ್ಡಿ, ಡಾ.ಸುಚೇತಾ, ಡಾ.ಗಣೇಶ್, ಡಾ.ದಿಲೀಪ್, ಡಾ.ಸಾಗರ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.

ನರ್ಸಿಂಗ್ ಸಿಬ್ಬಂದಿ, ಕಿರಿಯ ವೈದ್ಯರು ಮತ್ತು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ತರಬೇತಿ ಆಯೋಜಿಸಲಾಗಿತ್ತು. ಇಸಿಜಿ, ಮೂಲಭೂತ ಜೀವ ರಕ್ಷಣೆ, ತ್ರಿವರ್ಗೀಕರಣ ಪ್ರಕ್ರಿಯೆ ಈ ರೀತಿಯ ಹಲವಾರು ಕೌಶಲ್ಯಗಳನ್ನು ತಿಳಿಸಿಕೊಡಲಾಯಿತು. 

error: Content is protected !!