ಮಲೇಬೆನ್ನೂರು, ಅ.22- ಪಟ್ಟಣದ ಹೊರವಲಯದಲ್ಲಿರುವ ಶ್ರೀ ಭದ್ರಾಕಾಳಿ ಸಮೇತ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಕಾಶಿಪೀಠದ ನೂತನ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗತ್ಪಾದರು ಭೇಟಿ ನೀಡಿ, ಶ್ರೀ ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ನಂತರ ದೇವಸ್ಥಾನದ ಕಟ್ಟಡವನ್ನು ಶ್ರೀಗಳು ದೇವಸ್ಥಾನದ ಶಿಲ್ಪಕಲೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ದೇವಸ್ಥಾನ ಟ್ರಸ್ಟ್ ಕಮಿಟಿಯ ಬಿ. ಪಂಚಪ್ಪ, ಬಿ. ನಾಗೇಂದ್ರಪ್ಪ, ಬಿ.ಚಿದಾನಂದಪ್ಪ, ಬಿ. ಉಮಾಶಂಕರ್, ಬಿ. ಶಂಭುಲಿಂಗಪ್ಪ, ಬಿ. ನಾಗೇಶ್, ಬಿ. ಮಲ್ಲಿಕಾರ್ಜುನ್, ಎಸ್.ಎನ್. ಶಂಭುಲಿಂಗಪ್ಪ, ಬಿ.ವಿ.ರುದ್ರೇಶ್, ಬಿ.ಎಂ. ಹರ್ಷ, ಮತ್ತಿತರರು ಈ ವೇಳೆ ಹಾಜರಿದ್ದರು.