ವಾಲ್ಮೀಕಿ ರೂಪಾಂತರ ಜೀವನ ನೊಂದವರಿಗೆ ಸ್ಫೂರ್ತಿಯ ಕಥೆ

ವಾಲ್ಮೀಕಿ ರೂಪಾಂತರ ಜೀವನ ನೊಂದವರಿಗೆ ಸ್ಫೂರ್ತಿಯ ಕಥೆ

ದಾವಿವಿಯಲ್ಲಿ ಜರುಗಿದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮದಕರಿ ನಾಯಕ

ದಾವಣಗೆರೆ, ಅ.22-  ವಾಲ್ಮೀಕಿ ಅವರ ರೂಪಾಂತರವಾದ ಜೀವನವು ದಲಿತರಿಗೆ, ನೊಂದವರಿಗೆ ಎಂದೂ ಸ್ಫೂರ್ತಿಯ ಕಥೆಯಾಗಿದೆ. ವಾಲ್ಮೀಕಿಯ ಜೀವನದ ಆದರ್ಶಗಳು ಇಂದಿಗೂ ಸತ್ಯ ಮತ್ತು ನಿರಂತರವಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯ ಇಂಗ್ಲಿಷ್ ಅಧ್ಯಯನ ವಿಭಾಗದ  ಸಹಾಯಕ ಪ್ರಾಧ್ಯಾಪಕ  ಹೆಚ್.ಆರ್ ಮದಕರಿ ನಾಯಕ  ಹೇಳಿದರು. 

ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿ ಘಟಕದ ನೇತೃತ್ವದಲ್ಲಿ   ಆಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಅವರು ಮಾತನಾಡಿದರು.

ಮಹರ್ಷಿ ವಾಲ್ಮೀಕಿ ಭಾರತದ ಆದಿಕವಿ ಆಗಿದ್ದಾರೆ. ರಾಮಾಯಣ ಎಂದರೆ ವಾಲ್ಮೀಕಿ, ವಾಲ್ಮೀಕಿ ಎಂದರೆ ರಾಮಾಯಣ  ಎನ್ನುವಷ್ಟು ಜನಪ್ರಿಯತೆಯನ್ನು ಅವರು ಗಳಿಸಿರುತ್ತಾರೆ.  ಪ್ರತಿ ಅಕ್ಟೋಬರ್ ತಿಂಗಳಲ್ಲಿ ಇವರ ಜಯಂತಿಯನ್ನು ಆಚರಣೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

ವಾಲ್ಮೀಕಿ  ಭಾವಚಿತ್ರಕ್ಕೆ ಕುಲಸಚಿವ  ಪ್ರೊ. ಮಹಾಬಲೇಶ್ವರ್ ಯು.ಎಸ್., ಹಣಕಾಸು ಅಧಿಕಾರಿ  ದ್ಯಾಮನಗೌಡ ಮುದ್ದನಗೌಡ್ರ, ಸಂಚಾಲಕ ಡಾ. ನಿರಂಜನ್ ಎಂ.ಹೆಚ್., ವಿಶೇಷ ಅತಿಥಿ  ಮದಕರಿ ನಾಯಕ  ಮತ್ತು ಹಿರಿಯ ಪ್ರಾಧ್ಯಾಪಕ  ಪ್ರೊ. ಲಕ್ಷ್ಮಣ್ ಪಿ  ಹಾಗೂ ಸಿಂಡಿಕೇಟ್ ಸದಸ್ಯರು ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

error: Content is protected !!