ದಾವಣಗೆರೆ, ಅ.22- ನಗರದ ಸಂಕಲ್ಪ ಸೇವಾ ಫೌಂಡೇಶನ್ ಹಾಗೂ ಎಸ್.ಎಸ್. ನಾರಾಯಣ ಹಾರ್ಟ್ ಸೆಂಟರ್ ಇವರ ಸಹಯೋಗದಲ್ಲಿ ಎಸ್. ನಿಜಲಿಂಗಪ್ಪ ಬಡಾವಣೆಯ ಶ್ರೀ ಬಕ್ಕೇಶ್ವರ ಪ್ರೌಢಶಾಲೆಯಲ್ಲಿ ಉಚಿತ ಹೃದಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.
ಉದ್ಘಾಟನೆಯನ್ನು ವಿರಕ್ತಮಠದ ಶ್ರೀ ಬಸವ ಪ್ರಭು ಸ್ವಾಮೀಜಿಯವರು ಎಕೋ ಮಷಿನ್ ಒತ್ತುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಶ್ರೀಗಳು, ಸಂಕಲ್ಪ ಸೇವಾ ಸಂಸ್ಥೆಯು ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವುದು ಶ್ಲ್ಯಾಘನೀಯ. ಉಚಿತ ಹೃದಯ ತಪಾಸಣಾ ಶಿಬಿರಗಳಿಂದ ಅನೇಕ ಜನರಿಗೆ ಅನುಕೂಲವಾಗುತ್ತದೆ. ಅದೇ ರೀತಿ ಪರೀಕ್ಷೆ ಮಾಡುವಾಗ ಏನಾದರೂ ಹೃದಯ ಸಂಬಂಧಿ ಕಾಯಿಲೆ ಇದೆ ಎಂದು ಗೊತ್ತಾದರೆ ಮುಂಜಾಗ್ರತೆಯಾಗಿ ಚಿಕಿತ್ಸೆ ತೆಗೆದುಕೊಂಡು ಮುಂದಿನ ದಿನಗಳಲ್ಲಿ ಆರೋಗ್ಯವನ್ನು ಸುಧಾರಣೆಗೊಳಿಸಿಕೊಳ್ಳಲು ಇಂತಹ ಶಿಬಿರಗಳು ಅಗತ್ಯ ಎನಿಸುತ್ತವೆ ಎಂದು ತಮ್ಮ ಹಿತ ನುಡಿಗಳನ್ನು ನುಡಿದರು.
ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪವಿತ್ರ ಹಾಗೂ ಸಂಸ್ಥೆಯ ಸಹಶಿಕ್ಷಕರು ಮತ್ತು ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಜಿ. ಮಹಾಂತೇಶ್ ಹಾಗೂ ಮುಖ್ಯ ಅತಿಥಿಗಳಾದ ನಾಗರಾಜ ಕೆ.ಜೆ., ಬಸವರಾಜ ಎಚ್.ಎಸ್. ಕಡ್ಲೆ ಬಾಳು, ವಕೀಲ ವೆಂಕಟೇಶ್ ಬೊಜ್ಜ ಹಾಗೂ ಸಂಸ್ಥೆಯ ಇತರೆ ಸದಸ್ಯರುಗಳಾದ ಯುಸೂಫ್, ಶಂಕರ್, ಗಿರೀಶ್ ಹೆಗಡೆ, ಶಿವಪ್ಪ ಎಂ., ಸುಹೇಲ್ ಎಂ, ಆನಂದ, ಹನುಮಂತ ಎಂ., ವಿನೋದ್, ಸಮೀರ್ ಸಿ. ಗುತ್ತಲ್ ಭಾಗವಹಿಸಿದ್ದರು