ರಾಣೇಬೆನ್ನೂರು, ಅ.22- ತಾಲ್ಲೂಕಿನ ಕೋಡಿಯಾಲ-ಹೊಸಪೇಟೆ ಪುಣ್ಯಕೋಟಿ ಮಠದ ತಪೋ ಮಂದಿರದ ಮೇಲ್ಭಾಗದಲ್ಲಿ ರಂಭಾಪುರಿ ಲಿಂಗೈಕ್ಯ ಜಗದ್ಗುರು ಶ್ರೀ ವೀರಗಂಗಾಧರ ಭಗವತ್ಪಾದರ 36 ಅಡಿ ಎತ್ತರದ ಸಿಮೆಂಟ್ ಮೂರ್ತಿ ಹಾಗೂ ತುಂಗಭದ್ರಾ ನದಿಗೆ ತಡೆ ಗೋಡೆ ನಿರ್ಮಾಣದ ಶಂಕುಸ್ಥಾಪನೆ ಕಾರ್ಯಕ್ರಮವು ನಾಡಿದ್ದು ದಿನಾಂಕ 24 ರ ಗುರುವಾರ ನಡೆಯಲಿದೆ.
ಮುಕ್ತಿ ಮಂದಿರದ ಶ್ರೀ ವಿಮಲ ರೇಣುಕ ವೀರ ಮುಕ್ತಿಮುನಿ ಸ್ವಾಮೀಜಿ, ನೆಗಳೂರು ಶ್ರೀ ಗುರುಶಾಂತಲಿಂಗ ಸ್ವಾಮೀಜಿ ಹಾಗೂ ಕಡೆನಂದಿಹಳ್ಳಿ ಶ್ರೀ ರೇವಣಸಿದ್ದೇಶ್ವರ ಸ್ವಾಮಿಗಳು ಸಾನ್ನಿಧ್ಯ ವಹಿಸುವರು.
ಶಾಸಕ ಪ್ರಕಾಶ ಕೋಳಿವಾಡ ಶಂಕುಸ್ಥಾಪನೆ ನೆರವೇರಿಸುವರು. ಗ್ರಾಪಂ ಅಧ್ಯಕ್ಷರಾದ ಗೀತಾ ಶಿವಮೊಗ್ಗ ಅಧ್ಯಕ್ಷತೆ ವಹಿಸುವರು. ಶಾಸಕರಾದ ಬಿ.ಪಿ.ಹರೀಶ್, ಎಸ್.ವಿ. ಸಂಕನೂರ, ಮಾಜಿ ಸಚಿವರಾದ ಕೆ.ಎಸ್. ಈಶ್ವರಪ್ಪ, ಆರ್. ಶಂಕರ, ಮಾಜಿ ಶಾಸಕರಾದ ಅರುಣ ಪೂಜಾರ, ಎಚ್.ಎಸ್. ಶಿವಶಂಕರ, ಜೆ.ಡಿ.ಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ, ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಮತ್ತಿತರರು ಪಾಲ್ಗೊಳ್ಳುವರು.