ಜಗಳೂರು : ತರಕಾರಿ ಬೆಳೆ ಇಳುವರಿಗೆ ದೃಢೀಕೃತ ಬೀಜ, ಸಸ್ಯ ಬಳಸಿ

ಜಗಳೂರು : ತರಕಾರಿ ಬೆಳೆ ಇಳುವರಿಗೆ ದೃಢೀಕೃತ ಬೀಜ, ಸಸ್ಯ ಬಳಸಿ

ತಾಲ್ಲೂಕಿನ ಕೆವಿಕೆ ಕಾರ್ಯಕ್ರಮದಲ್ಲಿ ತೋಟಗಾರಿಕೆ ವಿಜ್ಞಾನಿ ಎಂ.ಜಿ. ಬಸವನಗೌಡ

ಜಗಳೂರು, ಅ.22- ತರಕಾರಿ ಬೆಳೆಗಳಲ್ಲಿ ಉತ್ತಮ ಇಳುವರಿಗೆ ದೃಢೀಕೃತ ಬೀಜ ಮತ್ತು ಸಸ್ಯಗಳನ್ನು ಬಳಸಿದರೆ  ಉತ್ತಮ ಇಳುವರಿ ಸಾಧ್ಯವೆಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ. ಬಸವನಗೌಡ ಅಭಿಪ್ರಾಯಪಟ್ಟರು.

ಜಗಳೂರು ತಾಲ್ಲೂಕು ನಿಬಗೂರು ಗ್ರಾಮದಲ್ಲಿ ಹಮ್ಮಿಕೊಂಡ ಮೆಣಸಿನಕಾಯಿ ಬೆಳೆಯ ಸಮಗ್ರ ಕೃಷಿ ಪ್ರಾತ್ಯಕ್ಷಿಕೆಯ ತಾಕಿಗೆ ಭೇಟಿ ನೀಡಿ ಅವರು ಮಾತನಾಡಿದರು.

ಪ್ರಸ್ತುತ ಗ್ರಾಮದಲ್ಲಿ ಅರ್ಕಾ ಗಗನ್ ಮೆಣಸಿನಕಾಯಿ ಹೈಬ್ರಿಡ್ ತಳಿಯ ಪ್ರಾತ್ಯಕ್ಷಿಕೆ ಹಮ್ಮಿಕೊಂಡಿದ್ದು, ಈ ಸಂಕರಣ ತಳಿಯು ಉತ್ತಮವಾದ ಕಾರದ ಅಂಶ ಹೊಂದಿದ್ದು, ಪ್ರಾರಂಭದಲ್ಲಿ ಹಸಿರು ಕಾಯಿಗಳಾಗಿದ್ದು, ಕ್ರಮೇಣ ಕೆಂಪು ಬಣ್ಣಕ್ಕೆ ತಿರುಗುತ್ತವೆ. ತಳಿಯ ಎಲೆ ಮುಟುರು ರೋಗಕ್ಕೆ ನಿರೋಧಕ ಶಕ್ತಿ ಹೊಂದಿದ್ದು, ಪ್ರತೀ ಎಕರೆಗೆ 10 ಟನ್ ಇಳುವರಿ ಕೊಡುವ ಸಾಮರ್ಥ್ಯವಿದೆ ಎಂದು ತಿಳಿಸಿದರು.

ನಾಟಿಗೂ ಮುನ್ನ ಸಸಿಗಳನ್ನು ಟ್ರೈಕೋಡರ್ಮಾ ದ್ರಾವಣದಲ್ಲಿ ಉಪಚಾರ ಮಾಡಿದರೆ ಶಿಲೀಂಧ್ರ ರೋಗಗಳನ್ನು ನಿಯಂತ್ರಿ ಸಬಹುದು. ಜೊತೆಗೆ ಸಮಗ್ರ ಪೋಷಕಾಂಶಗಳ ನಿರ್ವಹಣೆಯಿಂದ ಉತ್ತಮ ಇಳುವರಿ ಪಡೆಯಲು ಸಾಧ್ಯವೆಂದು ತಿಳಿಸಿದರು.

ಬೇಸಾಯ ತಜ್ಞ ಬಿ.ಓ ಮಲ್ಲಿಕಾರ್ಜುನ್‌ ಮಾತನಾಡಿ, ತರಕಾರಿ ಬೆಳೆಗಳಲ್ಲಿ ಕಳೆ ನಿರ್ವಹಣೆ ಒಂದು ಸವಾಲಾಗಿರುತ್ತದೆ. ಆದ್ದರಿಂದ ಹೊದಿಕೆ ಶೀಟ್‍ಗಳನ್ನು ಬಳಸಿ ಇತ್ತೀಚೆಗೆ ರೈತರು ತರಕಾರಿಗಳನ್ನು ಬೆಳೆಯುತ್ತಿ ರುವುದು ಉತ್ತಮ ಅಭ್ಯಾಸವೆಂದರು.

ಭೇಟಿಯ ಸಂದರ್ಭದಲ್ಲಿ ರೈತರಾದ ನಾಗರಾಜ, ಗುರುಸಿದ್ದನಗೌಡ ನಿಂಗಪ್ಪ ಮತ್ತಿತರರು ಹಾಜರಿದ್ದರು.

error: Content is protected !!