ಹರಪನಹಳ್ಳಿ, ಅ.21- ಪಟ್ಟಣದ ಪಶು ಚಿಕಿತ್ಸಾ ಕೇಂದ್ರದಲ್ಲಿ ಆರನೇ ಸುತ್ತಿನ ಕಾಲುಬಾಯಿ ಲಸಿಕೆ ಅಭಿ ಯಾನಕ್ಕೆ ಶಾಸಕರಾದ ಎಂ. ಪಿ. ಲತಾ ಮಲ್ಲಿಕಾರ್ಜುನ್ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಒಂದು ತಿಂಗಳ ಕಾಲ ತಾಲ್ಲೂಕಿನಲ್ಲಿ ಇರುವ ಎಲ್ಲಾ ದನಗಳು ಮತ್ತು ಎಮ್ಮೆಗಳಿಗೆ, ರೈತರ ಮನೆ ಬಾಗಿಲಿಗೇ ಹೋಗಿ 60 ಜನ ಲಸಿಕಾ ಸಿಬ್ಬಂದಿ ಲಸಿಕೆ ನೀಡುವರು. ರೈತರು ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸುವುದರ ಮುಖಾಂತರ ಕಾಲುಬಾಯಿ ರೋಗ ನಿರ್ಮೂ ಲನೆಗೆ ಸಹಕರಿಸಬೇಕು ಎಂದರು ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತೂರು ಬಸವರಾಜ, ಡಾ.ಶಿವಕುಮಾರ ಜ್ಯೋತಿ ಸೇರಿದಂತೆ ಇತರರು ಇದ್ದರು.
January 3, 2025