ದಾವಣಗೆರೆ, ಅ.20- ಜಿಲ್ಲಾ ವೀರಶೈವ ಸದ್ಭೋದನಾ ಸಮಿತಿ ಅಧ್ಯಕ್ಷ ದೇವರಮನೆ ಶಿವಕುಮಾರ್ ಅವರ ಮಾತೃಶ್ರೀ ಶ್ರೀಮತಿ ರತ್ನಮ್ಮ ದೇವರಮನೆ ಮಹಾರುದ್ರಪ್ಪ ಅವರ ನಿಧನದ ಹಿನ್ನೆಲೆಯಲ್ಲಿ ರಂಭಾಪುರಿ ಜಗದ್ಗುರುಗಳು ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ, ಸಾಂತ್ವನ ಹೇಳಿದರು. ವರ್ತಕ ದೇವರಮನೆ ಮಹಾರುದ್ರಪ್ಪ, ದೇವರಮನೆ ಶಿವಕುಮಾರ್, ಸಹೋದರರಾದ ದೇವರಮನೆ ಶಿವರಾಜ್, ದೇವರಮನೆ ಮುರುಗೇಶ್ ಮತ್ತು ಕುಟುಂಬ ವರ್ಗದವರು ಉಪಸ್ಥಿತರಿದ್ದರು.
ರಂಭಾಪುರಿ ಜಗದ್ಗುರುಗಳ ಭೇಟಿ
