ನೆರೆ ಹಾವಳಿಯಿಂದ ಫಸಲು ಹಾಳು ರೈತರಿಗೆ ಬೆಳೆ ಪರಿಹಾರಕ್ಕೆ ಒತ್ತಾಯ

ನೆರೆ ಹಾವಳಿಯಿಂದ ಫಸಲು ಹಾಳು  ರೈತರಿಗೆ  ಬೆಳೆ ಪರಿಹಾರಕ್ಕೆ ಒತ್ತಾಯ

ಹರಪನಹಳ್ಳಿ, ಅ.20- ನೆರೆ ಹಾವಳಿಯಿಂದ ಫಸಲು ಹಾಳಾಗಿರುವ ರಾಜ್ಯದ ರೈತರಿಗೆ  ಬೆಳೆ ಪರಿಹಾರ ಕೊಡಬೇಕು ಎಂದು  ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಬಾಗಳಿ ಕೊಟ್ರೇಶಪ್ಪ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕೆ ಹೇಳಿಕೆ ನೀಡಿದ ಅವರು, ರಾಜ್ಯದಲ್ಲಿ ಭೀಕರ ನೆರೆಹಾವಳಿಯಿಂದ  ಈರುಳ್ಳಿ, ಭತ್ತ, ಮೆಕ್ಕೆಜೋಳ, ಊಟದ ಜೋಳದ ಬೆಳೆಗಳು ಹಾಳಾಗಿದ್ದು, ತೆನೆಯಲ್ಲಿ ಮೊಳಕೆ ಒಡೆದು ರೈತರ ಹೊಟ್ಟೆ ಮೇಲೆ ಬರೆ ಎಳೆದಂತಾಗಿದೆ. ಮಳೆಗಾಲದಲ್ಲಿಯೇ ವಿವಿಧೆಡೆ ಕುಡಿಯುವ ನೀರಿಗೆ  ಸಮಸ್ಯೆಯಾಗಿದೆ. ರಸ್ತೆಗಳು ಹಾಳಾಗಿ  ರೈತರು,  ಕಾರ್ಮಿಕರು ಸಂಕಷ್ಟಕ್ಕೆ ತುತ್ತಾಗಿದ್ದಾರೆ.

ಇದರ ನಡುವೆ ರಾಜ್ಯದಲ್ಲಿ 1200ಕ್ಕೂ ಹೆಚ್ಚು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಅವಧಿಯಲ್ಲಿ  ಮಳೆಗಾಲದಲ್ಲಿ  ಮನೆಗೆ ಹಾನಿಯಾದರೆ ಸಂತ್ರಸ್ತರಿಗೆ ಮಳೆಹಾನಿ ಪರಿಹಾರ ಕೊಟ್ಟು  5 ಲಕ್ಷ  ರೂ. ವೆಚ್ಚದಲ್ಲಿ ಹೊಸಮನೆ ನಿರ್ಮಿಸಲು ತಕ್ಷಣ ಪರಿಹಾರ ಕೊಟ್ಟಿದ್ದರು. ಆದರೆ, ಈಗಿನ ಕಾಂಗ್ರೆಸ್ ಸರ್ಕಾರ  ಬಿದ್ದ ಮನೆಗಳಿಗೆ ಸಾವಿರ ಲೆಕ್ಕದಲ್ಲಿ  ಪರಿಹಾರ ಕೊಟ್ಟಿದ್ದಾರೆ. ಹೊಸಮನೆ ನಿರ್ಮಿಸಲು ಒಂದು ಲಕ್ಷಕ್ಕೆ ಇಳಿಕೆ ಮಾಡಿರುವುದು ರಾಜ್ಯದ ಜನತೆಯ ದುರಂತ ಎಂದು ಅವರು ಹೇಳಿದ್ದಾರೆ.

error: Content is protected !!