ಹೊನ್ನಾಳಿ, ಅ.20- ತಾಲ್ಲೂಕು ರೈತರು ತಮ್ಮ ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆಯ ಪ್ರಕ್ರಿಯೆಯಲ್ಲಿ 17,900 ರೈತರು ತಮ್ಮ ನೋಂದಣಿಯೊಂದಿಗೆ ತಾಲ್ಲೂಕು ಶೇ. 98 ರಷ್ಟು ಕಾರ್ಯ ಸಾಧನೆ ಮಾಡಿದೆ ಎಂದು ಎಇಇ ಜಯಪ್ಪ ತಿಳಿಸಿದರು.
ಅವರು ಇಂದು ಕೆಇಬಿ ಕಚೇರಿಯಲ್ಲಿ ನಡೆದ ರೈತರ ಕುಂದು – ಕೊರತೆಗಳ ಸಭೆಯಲ್ಲಿ ಖಾತೆ ಬದಲಾವಣೆ ಸೇರಿದಂತೆ ರೈತರ ಅನೇಕ ಸಮಸ್ಯೆಗಳ ಅರ್ಜಿಗಳನ್ನು ಪಡೆದು ಮಾತನಾಡಿದರು.
ಕಳೆದ ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ ವಿದ್ಯುತ್ ಅವಘಡದ ಮಾರಣಾಂತಿಕ ಅಪಘಾತದಲ್ಲಿ ನಾಲ್ಕು ರೈತರು ಸ್ವಯಂಕೃತ ಅಪರಾಧದಿಂದ ಸಾವನ್ನಪ್ಪಿದ್ದಾರೆ ಎಂದರು.
ವಿದ್ಯುತ್ ಅಪಘಾತದಲ್ಲಿ ಎರಡು ಪ್ರಾಣಿಗಳು ಸಾವನ್ನಪ್ಪಿವೆ. ತಾಲೂಕಿನ 27 ಗ್ರಾಮ ಪಂಚಾಯಿತಿಯಿಂದ ಬೀದಿ ವಿದ್ಯುತ್ ದೀಪ ಹಾಗೂ ಕುಡಿಯುವ ನೀರು ಯೋಜನೆಯ ವಿದ್ಯುತ್ ಬಾಕಿ 20 ಕೋಟಿ 47 ಲಕ್ಷ ರೂಗಳಿವೆ
ಎಂದರು. ಎಇ ರವಿಪ್ರಕಾಶ್, ಜೆಇ ರಾಜು,ಜಿಇ ಶಿವರಾಜ್, ರೈತ ಮುಖಂಡರಾದ ಕುಂದೂರು ಮುರುಳಿ, ಹಾಲೇಶ್, ತರಗನಹಳ್ಳಿ ಬಸವನಗೌಡ, ಅರಳಿಪುರ ತಿಪ್ಪೇಶ್ ಇನ್ನಿತರರಿದ್ದರು.