ಸುಗ್ಲಾದೇವಿಗೆ ವಿದ್ಯಾರತ್ನ ಪ್ರಶಸ್ತಿ

ಸುಗ್ಲಾದೇವಿಗೆ ವಿದ್ಯಾರತ್ನ ಪ್ರಶಸ್ತಿ

ಬೆಂಗಳೂರು, ಅ.21- ರುಪ್ಸಾ ಸಂಘದ ವತಿಯಿಂದ ಇಂದು ಏರ್ಪಡಿಸಿದ್ದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ದಾವಣಗೆರ – ಆವರಗೆರೆಯ ಶ್ರೀ ಸಿದ್ಧಲಿಂಗೇಶ್ವರ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿ ಶ್ರೀಮತಿ ಎ.ಹೆಚ್. ಸುಗ್ಲಾದೇವಿ ಅವರಿಗೆ `ವಿದ್ಯಾರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಭೋಜೇಗೌಡ, ನಂದಿಪುರ ಪುಣ್ಯ ಕ್ಷೇತ್ರದ ಡಾ. ಮಹೇಶ್ವರ ಮಹಾಸ್ವಾಮೀಜಿ ಪ್ರಶಸ್ತಿ ವಿತರಿಸಿದರು.

error: Content is protected !!