ಹೊನ್ನಾಳಿ, ಅ.18- ತಾಲ್ಲೂಕಿನ ಹುಣಸಘಟ್ಟ ಗ್ರಾಮದ ವಿದ್ಯಾರ್ಥಿ ಗಳು ಸೇರಿದಂತೆ ಸಾರ್ವಜನಿಕರ ಸಂಚಾರಕ್ಕೆ ಆಗುತ್ತಿದ್ದ ತೊಂದರೆಗೆ ಹಾಗೂ ಬೇಡಿಕೆಗೆ ಒತ್ತಾಯಿಸಿ, ಇಂದು ಕೆಎಸ್ಆರ್‌ಟಿಸಿ ಬಸ್ ಬಿಡುಗಡೆಗೊಳಿಸಲಾಗಿದೆ ಎಂದು ತಾಲ್ಲೂಕು ಎಸ್‌ಡಿಎಂಸಿ ಅಧ್ಯಕ್ಷ ಹುಣಸಘಟ್ಟ ಶಿವಲಿಂಗಪ್ಪ ತಿಳಿಸಿದರು. ಹುಣಸಘಟ್ಟ ಗ್ರಾಮದಿಂದ ಸೈದರ, ಕಲ್ಲಳ್ಳಿ, ನಿಂಬೆಗೊಂದಿ, ಆನ್ವೇರಿ, ಆಳಲೂರು, ಶಿವಮೊಗ್ಗ ತಲುಪಲಿದೆ ಎಂದರು.
ಪ್ರತಿದಿನ ಬೆಳಿಗ್ಗೆ 7.30 ರಿಂದ ಹೊನ್ನಾಳಿ ಬಿಟ್ಟು ಬೆನಕನಹಳ್ಳಿ, ಸಾಸ್ವೆಹಳ್ಳಿ, ಕುಳಘಟ್ಟಿ, ಕ್ಯಾಸಿನಕೇರಿ ಮಾರ್ಗವಾಗಿ ಹುಣಸಘಟ್ಟ ತಲುಪಿ ಅಲ್ಲಿಂದ ಕಲ್ಲಳ್ಳಿ ಮಾರ್ಗವಾಗಿ ಶಿವಮೊಗ್ಗ ತಲುಪಲಿದೆ.
ಶಿವಮೊಗ್ಗದಿಂದ ಸಂಜೆ 5 ಗಂಟೆಗೆ ಬಿಟ್ಟು 6 ಗಂಟೆಗೆ ಹುಣಸಘಟ್ಟ ಗ್ರಾಮವನ್ನು ತಲುಪಿ, 8.30ಕ್ಕೆ ಹೊನ್ನಾಳಿ ತಲುಪಲಿದೆ ಎಂದರು.
ಈ ಸಂದರ್ಭದಲ್ಲಿ ಹುಣಸಘಟ್ಟ ಗ್ರಾಮದ ಟಿ.ವಿ.ಹರೀಶ್, ಟಿ.ಕುಮಾರಪ್ಪ, ಚಂದ್ರಪ್ಪ ಮಡಿವಾಳ, ಚೆನ್ನಪ್ಪ ಮಡಿವಾಳ, ರಂಗೇಶ್, ವೀರಪ್ಪ, ಕಿರಣ್ ಗೌಡ ಇನ್ನಿತರರಿದ್ದರು.