ಹರಪನಹಳ್ಳಿ, ಅ.18-ತಾಲ್ಲೂಕು ಸಿಂಗ್ರಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಭಾರತದ ಮೊಟ್ಟ ಮೊದಲ ಮಹಾಕಾವ್ಯ ರಾಮಾಯಣ ರಚಿಸಿದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಸಿ. ಹಾಲೇಶ್, ಊರಿನ ಗಣ್ಯರಾದ ಟಿ. ಶೇಖರಪ್ಪ, ಈ. ಫಕ್ಕೀರಪ್ಪ, ಅಂಜಿನಪ್ಪ, ವಿಜಯ್ ಕುಮಾರ್, ಇ. ಫಕ್ಕಿರಾಜ್, ಬೀಡಿ ರುದ್ರಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಎಸ್.ಎನ್. ಮಂಜುನಾಥ್ ಕಾರಬಾರಿ, ರಾಜ ನಾಯಕ್ ಹಾಗೂ ಇತರರು ಭಾಗವಹಿಸಿದ್ದರು.
ಸಿಂಗ್ರಿಹಳ್ಳಿ: ಸರ್ಕಾರಿ ಶಾಲೆಯಲ್ಲಿ ವಾಲ್ಮೀಕಿ ಜಯಂತಿ
