ಹೊನ್ನಾಳಿ ತಾಲ್ಲೂಕಿನ ಕಾರ್ಯಕ್ರಮದಲ್ಲಿ ಶಾಸಕ ಡಿ.ಜಿ. ಶಾಂತನಗೌಡ ಪ್ರಶಂಸೆ
ಹೊನ್ನಾಳಿ, ಅ. 17 – ರಾಮಾಯಣ ಮಹಾಕಾವ್ಯದ ವೈಶಿಷ್ಟ್ಯ ಮತ್ತು ಅದರ ಜನಪ್ರಿಯತೆಯಿಂದಾಗಿ ಮಹರ್ಷಿ ವಾಲ್ಮೀಕಿಯವರು ಕವಿಕುಲ ಸಾರ್ವ ಭೌಮರಾಗಿ ದೇಶದ ಸಾಂಸ್ಕೃತಿಕ ಲೋಕ ದಲ್ಲಿ ನಿತ್ಯವೂ ಆರಾಧಿಸಲ್ಪಡುತ್ತಿದ್ದಾರೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ತಾಲ್ಲೂಕು ಆಡಳಿತ, ಸಮಾಜದ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ಗುರುವಾರ ಪಟ್ಟಣದ ಪುರಸಭೆ ಅವರಣದ ಕನಕ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಾಲ್ಮೀಕಿ, ಬುದ್ದ, ಬಸವ ಕನಕ ಮುಂತಾದವರು ಯಾವುದೇ ವಿಶ್ವವಿದ್ಯಾಲ ಯಗಳಲ್ಲಿ ಓದದೇ ಇದ್ದರೂ ಅವರು ಸಮಾಜಕ್ಕೆ ನೀಡಿದ ಮಾರ್ಗದರ್ಶನ, ಆದರ್ಶಗಳು ಜಗತ್ತಿನಲ್ಲಿ ಸೂರ್ಯ – ಚಂದ್ರರು ಇರುವತನಕ ಮಾನವ ಕುಲಕ್ಕೆ ಪ್ರಸ್ತುತವಾಗಿರುತ್ತದೆ ಎಂದು ಹೇಳಿದರು.
ವಾಲ್ಮೀಕಿಯವರ ರಾಮಾಯಣ, ವ್ಯಾಸರ ಮಹಾಭಾರತ ಗ್ರಂಥಗಳು ದೇಶದ ಸಾಮಾಜಿಕ, ರಾಜತಾಂತ್ರಿಕ, ಪ್ರಜಾತಂತ್ರ ವ್ಯವಸ್ಥೆಗಳಿಗೆ ಉತ್ತಮ ಸಂದೇಶಗಳನ್ನು ನೀಡುವ ಮಹಾ ಸಾಹಿತ್ಯ ಪ್ರಕಾರಗಳಾಗಿವೆ ಎಂದು ಹೇಳಿದರು.
ಉಪವಿಭಾಗಾಧಿಕಾರಿ ಅಭಿಷೇಕ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದ ಅನೇಕ ಭಾಷೆಗಳ ಕವಿಗಳು ಮಹರ್ಷಿ ವಾಲ್ಮೀಕಿ ಅವರ ಮಹಾಕಾವ್ಯ ರಾಮಾ ಯಣದಿಂದ ಪ್ರಭಾವಿತರಾಗಿದ್ದು, ರಾಷ್ಟ್ರ ಕವಿ ಕು.ವೆಂ.ಪು ಅವರ ರಾಮಾಯಣ ದರ್ಶನಂ ಹಾಗೂ ತೆಲಗು ಕವಿ ವಿಶ್ವನಾಥ ಸತ್ಯನಾರಾಯಣದಿಂದ ರಚಿತವಾದ ರಾಮಾಯಣ ಕಲ್ಪವೃಕ್ಷಮು ಈ ಕೃತಿಗಳಿಗೆ ಜ್ಞಾನಪೀಠ ಪ್ರಸಸ್ತಿ ದೊರೆತಿದ್ದು ರಾಮಾಯಣ ಕೃತಿಯಲ್ಲಿ ಮನೋಜ್ಞ ಪಾತ್ರಗಳ ಮೂಲಕ ನಿರೂಪಿಸಿರುವ ಜೀವನ ಮೌಲ್ಯಗಳು ಮತ್ತು ಆದರ್ಶಗಳು ಜಗತ್ತಿನ ಯಾವುದೇ ಕಾವ್ಯದಲ್ಲೂ ಕಂಡುಬರುವುದಿಲ್ಲ ಎಂದು ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಧನಂಜಯ ಉಪನ್ಯಾಸ ನೀಡಿ, ಸುಮಾರು 24 ಸಾವಿರ ಶ್ಲೋಕಗಳನ್ನು ಒಳಗೊಂಡಿ ರುವ ರಾಮಾಯಣ ಮಹಾ ಕಾವ್ಯವು ಭಾರತದ ಸಂವಿಧಾನವನ್ನೂ ಒಳಗೊಂ ಡಂತೆ ಕಲೆ, ಸಂಸ್ಕೃತಿ, ಸಂಗೀತ, ನಾಟಕ, ರಂಗಭೂಮಿ ಮುಂತಾದ ಕ್ಷೇತ್ರಗಳ ಮೇಲೆ ಅಗಾಧ ಪ್ರಭಾವನ್ನು ಬೀರಿದ್ದು, ಜಗತ್ತಿನ ಅನೇಕ ರಾಷ್ಟ್ರಗಳ ಭಾಷೆಗಳಿಗೂ ಅನುವಾದವಾಗಿದೆ ವಾಲ್ಮೀಕಿ ಅವರ ರಾಮಾಯಣ ಮಹಾಕಾವ್ಯವೇ ನಮಗೆ ದಾರಿದೀಪವಾಗಿದೆ ಎಂದು ಹೇಳಿದರು.
ತಾಲ್ಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಶಿವಾನಂದಪ್ಪ ಹಾಗೂ ಇತರರು ಮಾತನಾಡಿದರು.
ವಾಲ್ಮೀಕಿ ಸಮಾಜದ ಗೌರವಾಧ್ಯಕ್ಷ ಕೋಣನತಲೆ ನಾಗಪ್ಪ,ಕಾರ್ಯದರ್ಶಿ ಸಿ.ಹನುಮಂತಪ್ಪ, ಹಿರಿಯ ಮುಖಂಡ ಮಾರಿಕೊಪ್ಪದ ತಿಮ್ಮಪ್ಪ, ಪುರಸಭೆ ಅಧ್ಯಕ್ಷ ಮೈಲಪ್ಪ, ಮುಖ್ಯಾಧಿಕಾರಿ ಟಿ.ಲೀಲಾವತಿ, ತಹಶೀಲ್ದಾರ್ ಪಟ್ಟರಾಜ ಗೌಡ, ತಾ.,ಪಂ, .ಇ.ಓ. ಪ್ರಕಾಶ, ಪಿ.ಪಿ.ಐ. ಸುನಿಲ್ ಕುರ್ಮಾ, ಬಿ.ಇ.ಒ. ನಿಂಗಪ್ಪ, ಕೆ.ರಂಗನಾಥ, ಕ್ಯಾಸಿನಕೆರೆ ಶೇಖರಪ್ಪ, ಸಮಾಜದ ಖಜಾಂಚಿ ಕುಳಗಟ್ಟೆ ಹನುಮಂತಪ್ಪ, ಸಮಾಜ ಕಲ್ಯಾ ಣಾಧಿಕಾರಿ ಉಮಾ, ಬಿ.ಸಿ.ಎಂ. ಅಧಿಕಾರಿ ಮೃತ್ಯುಂಜಯ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.