ದಾವಣಗೆರೆ, ಅ. 15- ನಾಡಿದ್ದು ದಿನಾಂಕ 17 ರಿಂದ 20ರವರೆಗೆ ಹರಿಯಾಣದ ಸೋನಿಪತ್ನಲ್ಲಿ ನಡೆಯಲಿರುವ 19 ವರ್ಷದ ಒಳಗಿನ ರಾಷ್ಟ್ರೀಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಕರ್ನಾಟಕ ರಾಜ್ಯ ತಂಡಕ್ಕೆ ನಗರದ ಅಮೃತಾನಂದಮಯಿ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಪಾರ್ಥ ಜಿ. ಜೋಯ್ಸ್ ಆಯ್ಕೆಯಾಗಿದ್ದಾರೆ. ಪಾರ್ಥ, ದಾವಣಗೆರೆ ಕ್ರಿಕೆಟ್ ಕ್ಲಬ್ನ ತರಬೇತುದಾರ ಕೆ.ಎನ್.ಗೋಪಾಲಕೃಷ್ಣ ಹಾಗೂ ಖೋ-ಖೋ ರಾಷ್ಟ್ರೀಯ ಕ್ರೀಡಾಪಟು – ನಮನ ಅಕಾಡೆಮಿಯ ಶ್ರೀಮತಿ ಮಾಧವಿ ಗೋಪಾಲಕೃಷ್ಣ ದಂಪತಿ ಪುತ್ರ.
January 5, 2025