ನಗರದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ

ನಗರದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ

ದಾವಣಗೆರೆ, ಅ.15- ನಗರದ ರಿಲೈಯನ್ಸ್ ಸ್ಮಾರ್ಟ್ ಬಜಾರ್, ಅಂಬಿಕಾ ಫರ್ನೀಚರ್ ಹಾಗೂ ಕರೂರು ಇಂಡಸ್ಟ್ರೀಯಲ್ ಏರಿಯಾದ ಶಾಕೀರಾ ಗಾರ್ಮೆಂಟ್ಸ್‌ನಲ್ಲಿ ಇಂದು ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನದಲ್ಲಿ ಲೋಕಸಭಾ ಕ್ಷೇತ್ರದ ಮುಖಂಡರಾದ ಶ್ರೀಮತಿ‌ ಗಾಯತ್ರಿ ಸಿದ್ದೇಶ್ವರ ಅವರು ಭಾಗವಹಿಸಿ, ಮೋದಿಜೀ ಸರ್ಕಾರ ಕಳೆದ 10 ವರ್ಷಗಳಿಂದ ಮಹಿಳೆಯರಿಗಾಗಿ ಜಾರಿಗೆ ತಂದಿರುವ ಯೋಜನೆಯ ಬಗ್ಗೆ ಮಾತನಾಡಿ ಹೆಚ್ಚು ಸದಸ್ಯತ್ವ ಮಾಡಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಮುಖಂಡರಾದ ಗೌತಮ್ ಜೈನ್, ನಜೀರ್ ಸಾಬ್, ಟಿಪ್ಪು ಸಾಬ್, ಬಿಜೆಪಿ ಮಹಿಳಾ ಮೋರ್ಚಾ ಮುಖಂಡರಾದ ಪುಷ್ಪ ವಾಲಿ, ನೀತು ಭಂಡಾರಿ ಹಾಗೂ ಇನ್ನೂ ಅನೇಕರು ಉಪಸ್ಥಿತರಿದ್ದರು.

error: Content is protected !!