ದಾವಣಗೆರೆ, ಅ.15- ಯುಬಿಡಿಟಿ ಕಾಲೇಜಿನ ಉಳಿವಿಗಾಗಿ ನಾಳೆ ದಿನಾಂಕ 16ರ ಬುಧವಾರ ದಾವಣಗೆರೆ ಬಂದ್ಗೆ ಕರ್ನಾಟಕ ಏಕತಾ ವೇದಿಕೆಯು ಸಂಪೂರ್ಣ ಬೆಂಬಲ ನೀಡಲಿದೆ ಎಂದು ವೇದಿಕೆಯ ಅಧ್ಯಕ್ಷ ಎನ್.ಹೆಚ್. ಹಾಲೇಶ್ ತಿಳಿಸಿದ್ದಾರೆ.
ರಾಜ್ಯದಲ್ಲಿರುವ 16 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಪೈಕಿ ದಾವಣಗೆರೆಯ ಯುಬಿಡಿಟಿ ಕಾಲೇಜು ಒಂದಾಗಿದೆ. ಈ ಕಾಲೇಜಿನಲ್ಲಿ ಶೇ.50ರಷ್ಟು ಸೀಟುಗಳನ್ನು ಪೇಮೆಂಟಿಗೆ ಮಾರಾಟ ಮಾಡಿದರೆ ಬಡ ಹಾಗೂ ರೈತ ಮಕ್ಕಳ ಓದಿಗೆ ತೊಂದರೆಯಾಗಲಿದೆ ಎಂದು ದೂರಿದ್ದಾರೆ.
ಪ್ರತಿ ಬಡ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಮಾಡುವ ಕನಸನ್ನು ಸಾಕಾರ ಗೊಳಿಸುವ ಪ್ರಯತ್ನವಾಗಿ ಯುಬಿಡಿಟಿ ಕಾಲೇಜಿಗೆ ನೀಡುವ ಅನುದಾನವನ್ನು ಹೆಚ್ಚಿಸಿ, ಕೇವಲ ಸರ್ಕಾರಿ ಕೋಟವನ್ನು ಮಾತ್ರ ಅನ್ವಯಿಸಿ ಕಾಲೇಜು ನಡೆಸಬೇಕೆಂದು ಆಗ್ರಹಿಸಿದ್ದಾರೆ.