ಚಿಕ್ಕನಹಳ್ಳಿ ದೊಡ್ಡಪ್ಪ ಶಾಲಾ ಶಿಕ್ಷಕರಿಗೆ ಗುರುವಂದನೆ

ಚಿಕ್ಕನಹಳ್ಳಿ ದೊಡ್ಡಪ್ಪ ಶಾಲಾ ಶಿಕ್ಷಕರಿಗೆ ಗುರುವಂದನೆ

ದಾವಣಗೆರೆ, ಅ.15- ಸ್ವಾಮಿ ವಿವೇಕಾನಂದ ಬಡಾವಣೆಯ ಶ್ರೀ ರಾಮಾಂಜನೇಯ ವಿದ್ಯಾಸಂಸ್ಥೆಯ ಶ್ರೀ ಚಿಕ್ಕನಹಳ್ಳಿ ದೊಡ್ಡಪ್ಪ ಪ್ರೌಢಶಾಲೆಯ 1997-98 ಸಾಲಿನ 10ನೇ ತರಗತಿಯ ಹಳೇ ವಿದ್ಯಾರ್ಥಿಗಳಿಂದ  ಅರ್ಥಪೂರ್ಣ ಗುರುವಂದಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು  ನಗರದ ರಾಸ್ತಾ ಹೋಟೆಲ್‌ನಲ್ಲಿ  ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಮುಖ್ಯೋಪಾಧ್ಯಾಯರಾದ ಡಿ. ರುದ್ರಮುನಿ ಅವರು, 26 ವರ್ಷಗಳ ನಂತರ ಈ ಕಾರ್ಯಕ್ರಮ ಸಾರ್ಥಕತೆ ಎನಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕರನ್ನು ಸನ್ಮಾನಿಸಿ, ಗೌರವಿಸಲಾಯಿತು. ಮುಖ್ಯೋಪಾಧ್ಯಾಯರಾದ ಹೆಚ್. ಶಿವಮೂರ್ತಿ, ಶಿಕ್ಷಕರುಗಳಾದ ಆರ್.ಆರ್. ಬೋಳಕಟ್ಟೆ, ಮಹೇಶ್ವರಪ್ಪ, ಮಂಜಪ್ಪ, ಜಗದೀಶ್ ಅವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಶಾಲೆಯ ಸಿಬ್ಬಂದಿಗಳಾದ  ನಾಗರಾಜಪ್ಪ, ರಾಮಣ್ಣ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!