ರೋಟರಿ, ಇನ್ನರ್‌ವ್ಹೀಲ್‌ನಿಂದ ನೇತ್ರ ದಿವಸ್‌

ರೋಟರಿ, ಇನ್ನರ್‌ವ್ಹೀಲ್‌ನಿಂದ ನೇತ್ರ ದಿವಸ್‌

ದನಗಳು 237801, ಎಮ್ಮೆಗಳು 91896 ಸೇರಿ ಒಟ್ಟು 329697, ಕುರಿಗಳು 238367, ಮೇಕೆಗಳು 79429 ಸೇರಿ ಒಟ್ಟು 317796, ಮೊಲ 98, ಇತರೆ 45, ನಾಯಿಗಳು 12091, ಹಂದಿಗಳು 2117 ಸೇರಿ ಒಟ್ಟು ಜಾನುವಾರಗಳು 661844, ಕುಕ್ಕಟಗಳು 2505966 ಇವೆ.

ದಾವಣಗೆರೆ, ಅ.15- ಜಿಲ್ಲೆಯಲ್ಲಿನ ಜಾನುವಾರುಗಳಿಗೆ ಕಾಲುಬಾಯಿ ರೋಗ ತಡೆಗಾಗಿ 6ನೇ ಸುತ್ತಿನ ಲಸಿಕಾ ಕಾರ್ಯಕ್ರಮವನ್ನು ಅಕ್ಟೋಬರ್ 21 ರಿಂದ ನವೆಂಬರ್ 20 ರವರೆಗೆ ಸತತವಾಗಿ ಒಂದು ತಿಂಗಳ ಕಾಲ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಜಿಲ್ಲೆಯಲ್ಲಿ 20 ನೇ ಜಾನುವಾರು ಗಣತಿಯಂತೆ 329697 ದನ ಮತ್ತು ಎಮ್ಮೆಗಳಿದ್ದು ಇವುಗಳಿಗೆ ಶೇ 100 ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಕೇಂದ್ರ ಸರ್ಕಾರದಿಂದ 2,60,700 ಡೋಸ್ ಕಾಲು ಬಾಯಿ ರೋಗ ಲಸಿಕೆ ಸರಬರಾಜಾಗಿದ್ದು ಅಷ್ಟೇ ಪ್ರಮಾಣದ ಸಿರಿಂಜ್ ಸಹ ಸರಬರಾಜಾಗಿವೆ.

 ಜಾನುವಾರುಗಳಿಗೆ ಲಸಿಕೆ ಹಾಕಲು  ಒಂದು ಬ್ಲಾಕ್‍ಗೆ 100-120 ಜಾನುವಾರುಗಳಂತೆ 2800 ಬ್ಲಾಕ್ ಗಳನ್ನು ರಚಿಸಿದ್ದು 321 ಲಸಿಕಾದಾರರಿಗೆ ಬ್ಲಾಕ್‍ವಾರು ಲಸಿಕಾ ದಿನಾಂಕ ನಿಗದಿಪಡಿಸ ಲಾಗಿದೆ. ಹಾಗೂ ಲಸಿಕಾ ಸಂದರ್ಭದಲ್ಲಿ ಆಕಸ್ಮಿಕ ಪ್ರತಿಕೂಲ ಪರಿಣಾಮಗಳನ್ನು ಎದುರಿಸಲು ಅವ ಶ್ಯಕ ಔಷಧಿಗಳನ್ನು ಕೂಡಾ ಸಂಗ್ರಹಿಸಿಡಲಾಗಿದೆ. 4 ತಿಂಗಳ ಮೇಲಿನ ಎಲ್ಲಾ ಜಾನುವಾರುಗಳಿಗೆ ಮನೆ ಬಾಗಿಲಲ್ಲೇ ಲಸಿಕಾ ಹಾಕಲಾಗುತ್ತದೆ. ಕರುಗಳಿಗೆ 28 ದಿನಗಳ ನಂತರ ಬೂಸ್ಟರ್ ಲಸಿಕೆ ಹಾಕಲಾಗುತ್ತದೆ. 

ಗರ್ಭ ಇರುವ, ರೋಗಗ್ರಸ್ತ ಮತ್ತು ಮಾಲೀಕರು ನಿರಾಕರಿಸಿದ ಜಾನುವಾರು ಗಳಿಗೆ ಕೂಂಬಿಂಗ್ ಕಾರ್ಯಕ್ರಮದಲ್ಲಿ ಲಸಿಕೆ ಹಾಕಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಪಾಲಿಕೆ ಆಯುಕ್ತರಾದ ರೇಣುಕಾ, ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ.ಚಂದ್ರಶೇಖರ್ ಸುಂಕದ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!