ಮೊಕದ್ದಮೆ ವಾಪಸ್ ಪಡೆಯಲು ರಾಜ್ಯ ಸರ್ಕಾರದ ಹುನ್ನಾರ

ಮೊಕದ್ದಮೆ ವಾಪಸ್ ಪಡೆಯಲು ರಾಜ್ಯ ಸರ್ಕಾರದ ಹುನ್ನಾರ

ಹೊನ್ನಾಳಿ, ಅ. 14 – 2013ರಲ್ಲಿ ಆಡಳಿತ ನಡೆಸಿದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪಿಎಫ್‍ಐ ಮತ್ತು ಎಸ್‍ಡಿಪಿಐ ಕಾರ್ಯಕರ್ತರ ಮೇಲಿದ್ದ ಪ್ರಕರಣ ಗಳನ್ನು ವಾಪಾಸ್ ಪಡೆದಿತ್ತು. ಆ ಕಾರಣದಿಂದ ಮತ್ತೆ ರಾಜ್ಯದಲ್ಲಿ ಕೆಲ ಅಲ್ಪ ಸಂಖ್ಯಾತ ಗೂಂಡಾಗಳು ತಮ್ಮ ವಿಚ್ಚಿದ್ರ ಕಾರಕ ಚಟುವಟಿಕೆಗಳನ್ನು ಪ್ರಾರಂಭಿಸಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ತಾಲ್ಲೂಕಿನ ನರಸಗೊಂಡನಹಳ್ಳಿ ಗ್ರಾಮ ದಲ್ಲಿ ಇಂದು ಹಮ್ಮಿಕೊಂಡಿದ್ದ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಅವರು ಮಾತನಾಡಿದರು.

ಹುಬ್ಬಳ್ಳಿ ನಗರದಲ್ಲಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಮಾಡಿ, ಮಾರಕಾಸ್ತ್ರ ಗಳಿಂದ ದೌರ್ಜನ್ಯ ನಡೆಸಿದ ಗೂಂಡಾಗಳ ಮೇಲೆ ಇದ್ದಂತಹ ಮೊಕದ್ದಮೆಗಳನ್ನು ರಾಜ್ಯ ಸರ್ಕಾರ ವಾಪಾಸ್ ಪಡೆಯುತ್ತಿರುವುದು ಖಂಡನೀಯ, ಕಲ್ಲು ತೂರಾಟ ಮಾಡಿದವರ ವಿರುದ್ಧ ಎಫ್‍ಐಆರ್ ದಾಖಲು ಮಾಡಿದ್ದರೂ ಸರ್ಕಾರ ವಾಪಾಸ್ ಪಡೆಯಲು ಮುಂದಾಗಿರುವುದು ಅಲ್ಪಸಂಖ್ಯಾತ ಗೂಂಡಾಗಳಿಗೆ ಮತ್ತಷ್ಟೂ ಗಲಾಟೆ ಮಾಡಲು ಇಂಬು ಕೊಟ್ಟಂತಾಗಿದೆ ಸರ್ಕಾರದಿಂದ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣವಾಗಿದೆ ಎಂದು ದೂರಿದರು.

ನ್ಯಾಯಾಲಯ ದೂರುಗಳನ್ನು ವಾಪಾಸ್ ಪಡೆಯಲು ಒಪ್ಪಿದರೆ ಪ್ರಕರಣಗಳನ್ನು ವಾಪಸ್ ಪಡೆಯಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದು ಶುದ್ಧ ಸುಳ್ಳು, ನ್ಯಾಯಾಲಯ ಹೇಗೆ ಒಪ್ಪಿಕೊಳ್ಳುತ್ತದೆ. ಸಿದ್ದರಾಮಯ್ಯ ಅವರು ಸುಖಾಸುಮ್ಮನೇ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿಯವರ ಮೇಲಿದ್ದ ಮೊಕದ್ದಮೆಗಳನ್ನು ಸರ್ಕಾರ ವಾಪಾಸ್ ಪಡೆಯುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ, ನಾವೇನು ನಮ್ಮ ಮೇಲಿರುವ ಪ್ರಕರಣಗಳನ್ನು ವಾಪಾಸ್ ಪಡೆಯ ಬೇಕು ಎಂದು  ಅರ್ಜಿ ಹಾಕಿದ್ದೇವೆಯೋ ಎಂದು ಪ್ರಶ್ನಿಸಿದ ಅವರು, ಬಿಜೆಪಿ ಹಾಗೂ ಹಿಂದೂಗಳ ಮೇಲಿದ್ದ ಮೊಕದ್ದಮೆಗಳನ್ನು ವಾಪಸ್ ಮಾಡುವ ನೆಪದಲ್ಲಿ ಗೂಂಡಾಗಿರಿ ಮಾಡಿದ ಅಲ್ಪ ಸಂಖ್ಯಾತರ ಮೇಲಿದ್ದ ಮೊಕದ್ದಮೆಗಳನ್ನು ವಾಪಾಸ್ ಪಡೆಯುವ ಹುನ್ನಾರ ಇದಾಗಿದೆ. ಇದೊಂದು ದೇಶದ್ರೋಹ ಸರ್ಕಾರ ಎಂದರು.

ರಾಜ್ಯ ಸರ್ಕಾರ ಗಣೇಶ ವಿಸರ್ಜನೆ ವೇಳೆಯಲ್ಲಿ ಹಿಂದು ಯುವಕರ ಮೇಲೆ ಹಾಕಿರುವ ಎಲ್ಲಾ ಮೊಕದ್ದಮೆಗಳನ್ನು ತಕ್ಷಣ ಸರ್ಕಾರ ವಾಪಸ್ ಪಡೆಯಬೇಕು  ಎಂದು ಒತ್ತಾಯಿಸಿದರು. ಬಿಜೆಪಿ ಮುಖಂಡ ನಾಗರಾಜ್ ಅರಕೆರೆ ಹಾಗೂ ಕಾರ್ಯರ್ತರು ಇದ್ದರು.

error: Content is protected !!