ವಿಯೆಟ್ನಾಂ ಸಮ್ಮೇಳನಕ್ಕೆ ಡಾ. ಶಶಿಧರ, ಡಾ. ಪಾಳೇದ

ವಿಯೆಟ್ನಾಂ ಸಮ್ಮೇಳನಕ್ಕೆ  ಡಾ. ಶಶಿಧರ, ಡಾ. ಪಾಳೇದ

ದಾವಣಗೆರೆ, ಅ. 14 – ವಿಯೆಟ್ನಾಂ ದೇಶದ ಟೈನ್ ಜಿಯಾಂಗ್ ವಿಶ್ವವಿದ್ಯಾಲಯದಲ್ಲಿ ಇದೇ ದಿನಾಂಕ 17 ರಿಂದ 19 ವರೆಗೆ ನಡೆಯಲಿರುವ ಅಂತರರಾಷ್ಟಿಯ ಸಮ್ಮೇಳನದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ. ಆರ್.ಶಶಿಧರ ಮತ್ತು ಡಾ. ಅಶೋಕಕುಮಾರ ಪಾಳೇದ ಅವರು ಸಂಶೋಧನಾ ಪ್ರಬಂಧ ಮಂಡನೆ ಮಾಡಲಿದ್ದಾರೆ.

ಸಮ್ಮೇಳನದಲ್ಲಿ 40ಕ್ಕೂ ಹೆಚ್ಚು ದೇಶಗಳ ಶಿಕ್ಷಣ ತಜ್ಞರು ಭಾಗವಹಿಸಲಿ ದ್ದಾರೆ. ಡಾ. ಶಶಿಧರ ಅವರು ವ್ಯವಹಾರ ನಿರ್ವಹಣೆ ವಿಷಯದಲ್ಲಿ ಹಾಗೂ ಡಾ. ಅಶೋಕಕುಮಾರ ಪಾಳೇದ ಅವರು ರಾಜ್ಯಶಾಸ್ತ್ರ ವಿಷಯದಲ್ಲಿ ಸಂಶೋ ಧನಾ ಪ್ರಬಂಧ ಮಂಡಿಸುವರು. ಇದೇ ಸಂದರ್ಭದಲ್ಲಿ ಇದೇ ದಿನಾಂಕ 21 ಮತ್ತು 22 ರಂದು ಕಾಂಬೋಡಿಯದ ನ್ಯಾಷನಲ್ ಯುನಿವರ್ಸಿಟಿ ಆಫ್ ಮ್ಯಾನೇಜ್‌ಮೆಂಟ್ ಹಾಗೂ ಲಾವೋಸ್‌ನ ನ್ಯಾಷನಲ್ ಯುನಿವರ್ಸಿಟಿ ಆಫ್ ಲಾವೋಸ್‌ನ ಆಹ್ವಾನದ ಮೇರೆಗೆ ಅವರು ಉಪನ್ಯಾಸ ನೀಡಲಿದ್ದಾರೆ.

ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಡಿ. ಕುಂಬಾರ, ಕುಲಸಚಿವ ಪ್ರೊ.ಯು.ಎಸ್. ಮಹಾಬಲೇಶ್ವರ, ಪರೀಕ್ಷಾಂಗ ಕುಲಸಚಿವ ಪ್ರೊ.ರಮೇಶ ಅವರು ಡಾ. ಶಶಿಧರ ಮತ್ತು ಡಾ. ಅಶೋಕಕುಮಾರ ಅವರನ್ನು ಅಭಿನಂದಿಸಿ ಬೀಳ್ಕೊಟ್ಟರು.

error: Content is protected !!