ದಾವಣಗೆರೆ, ಅ.13- ನವರಾತ್ರಿಯ ವಿಜಯ ದಶಮಿ ದಿನವಾದ ಶನಿವಾರ ಸಂಜೆ ನಗರದ ಎಸ್. ನಿಜಲಿಂಗಪ್ಪ ಬಡಾವಣೆಯಲ್ಲಿರುವ ಶ್ರೀ ಶಾರದಾಂಬ ದೇವಿ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ರಾಜಬೀದಿ ಗಳಲ್ಲಿ ಸಂಚರಿಸಿ, ಬನ್ನಿ ಮಂಟಪಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು. ಶ್ರೀ ಶಾರದಾಂಬ ದೇವಸ್ಥಾನದಿಂದ ಹೊರಟ ಉತ್ಸವಕ್ಕೆ ಪುರೋಹಿತರಾದ ಸುಬ್ರಹ್ಮಣ್ಯ ಭಟ್ ಅವರು ಪೂಜೆ ಸಲ್ಲಿಸಿದರು.
ವೇದಬ್ರಹ್ಮ ಶ್ರೀ ಶಂಕರನಾರಾಯಣ ಶಾಸ್ತ್ರಿಗಳ ಮಾರ್ಗದರ್ಶನದಲ್ಲಿ ಶ್ರೀ ಶಂಕರ ಸೇವಾ ಸಂಘದ ಅಧ್ಯಕ್ಷ ಡಾ. ಬಿ.ಟಿ ಅಚ್ಯುತ್ ಮತ್ತು ಕಾರ್ಯದರ್ಶಿ ಶ್ರೀನಿವಾಸ ಜೋಷಿರವರ ನೇತೃತ್ವದಲ್ಲಿ ಉಪಾಧ್ಯಕ್ಷ ಮೋತಿ ಸುಬ್ರಮಣ್ಯ, ಗಿರೀಶ್ ನಾಡಿಗ್, ಮಂಡಕ್ಕಿ ಸುಬ್ಬಣ್ಣ, ವಿನಾಯಕ ಜೋಶಿ, ಬಾಲಕೃಷ್ಣ ವೈದ್ಯ, ಅನಿಲ್ ಬಾರಂಗೆಳ್, ಶಶಿಧರ್, ರಮೇಶ್ ಪಾಟೀಲ್, ರಮೇಶ್ ಎಸ್, ಪಟ್ಟಾಭಿರಾಮನ್, ದಿವಾಕರ್, ಮಹಿಳೆಯರ ಸಂಘದ ಅಧ್ಯಕ್ಷರಾದ ಶ್ರೀಮತಿ ನಳಿನಿ ಅಚ್ಯುತ್ ಮತ್ತು ಇತರರು ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಉತ್ಸವ ಹಿಂದಿರುಗಿದ ನಂತರ ದೇವಿಗೆ ಕುಂಕು ಮಾರ್ಚನೆ, ಮಹಾ ಮಂಗಳಾರತಿ ನಂತರ ಭಕ್ತರು ದೇವಿಯ ದರ್ಶನ ಪಡೆದು ಬನ್ನಿ ವಿನಿಮಯ ಮಾಡಿಕೊಂಡರು.