ದಾವಣಗೆರೆ, ಅ.13- ಶಿಕ್ಷಣ ಕ್ಷೇತ್ರದಲ್ಲಿನ ಗಣನೀಯ ಸಾಧನೆಗಾಗಿ ಶಿಕ್ಷಣ ಸಂಸ್ಥೆಗಳಿಗೆ ಸೂರ್ಯ ಫೌಂಡೇಷನ್ (ಬೆಂಗಳೂರು) ಸಂಸ್ಥೆಯು ಅತ್ಯುತ್ತಮ ಶಾಲೆ ಎಂದು ಕೊಡ ಮಾಡುವ ‘ಶಿಕ್ಷಣ ಚೈತನ್ಯ – 2024’ ಪ್ರಶಸ್ತಿಗೆ ನಗರದ ಈಶ್ವರಮ್ಮ ಶಾಲೆ ಭಾಜನವಾಗಿದೆ.
ಈಶ್ವರಮ್ಮ ಶಾಲೆಯು ಮೌಲ್ಯ ಶಿಕ್ಷಣ ನೀಡುತ್ತಿರುವ ಮೂಲಕ ಶಾಲೆಯನ್ನು ಸಾಧನೆಯತ್ತ ಮುನ್ನಡೆಸಲಾಗುತ್ತಿದೆ. ಈ ಶಾಲೆಯನ್ನು ಮಾದರಿ ಶಾಲೆ ಎಂದು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದ್ದು, ಇದೇ ದಿನಾಂಕ 15ರಂದು ಬೆಂಗಳೂರಿನಲ್ಲಿ ಏರ್ಪಾಡಾಗಿರುವ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಈಶ್ವರಮ್ಮ ಶಾಲೆಗೆೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಸೂರ್ಯ ಫೌಂಡೇಶನ್ ತಿಳಿಸಿದೆ.