ರಾಣೇಬೆನ್ನೂರು, ಅ.13- ಮಾನವ ಜನ್ಮ ಪಾವನವಾಗಬೇಕಾದರೆ ಪುರಾಣ, ಪ್ರವಚನಗಳನ್ನು, ದೇವತೆಗಳ ಚರಿತ್ರೆಗಳನ್ನು ಆಲಿಸಿ ಪಠಿಸಬೇಕೆಂದು ಮಾತೆ ಅನ್ನಪೂರ್ಣೇಶ್ವರಿ ಹಲಗೇರಿ ಹೇಳಿದರು.
ತಾಲ್ಲೂಕಿನ ಹಿರೇಬಿದರಿ ಗ್ರಾಮದೇವತೆ ದೇವಸ್ಥಾನದಲ್ಲಿ ವಿಜಯದಶಮಿ ನಿಮಿತ್ಯ ನಡೆದ 9 ದಿನಗಳ ಕಾಲ ಅವರು ದೇವಿಯ ಪುರಾಣ, ಪ್ರವಚನ ಕಾರ್ಯಕ್ರಮ ನಡೆಸಿಕೊಟ್ಟು, ಆಶೀರ್ವಚನ ನೀಡಿದರು.
ಭೀಮಪ್ಪ ಮಾವಿನತೋಪ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಶಿವಕುಮಾರ ಮಲ್ಲಾಪುರ ಇವರು ದೇವಸ್ಥಾನಕ್ಕೆ ವಿದ್ಯುತ್ ಚಾಲಿತ ನಾಮಫಲಕವನ್ನು ದೇಣಿಗೆಯಾಗಿ ನೀಡಿದರು.
ಕಾರ್ಯಕ್ರಮದಲ್ಲಿ ನಾಗಪ್ಪ ಕೂನಬೇವು, ವಿರುಪಾಕ್ಷಪ್ಪ ಹರಪನಹಳ್ಳಿ, ಕೆಂಚನಗೌಡ ಪಾಟೀಲ, ಮಂಜುನಾಥ ಕಂಚಿಕೇರಿ, ಪಾಲಾಕ್ಷಗೌಡ ಕೂನಬೇವು, ಸಂತೋಷ ಬಾಸೂರ, ಮಂಜುನಾಥ ಕುಮರಿ ಹಾಗೂ ಗ್ರಾಮದ ಗುರು-ಹಿರಿಯರು ಉಪಸ್ಥಿತರಿದ್ದರು.