ಮಲೇಬೆನ್ನೂರು, ಅ.13- ಕಳೆದ 3 – 4 ದಿನಗಳಿಂದ ಸುರಿದ ಮಳೆಯಿಂದಾಗಿ ಕೊಮಾರನಹಳ್ಳಿ ಸಮೀಪ (ಎಸ್.ಹೆಚ್.ರಸ್ತೆ ಪಕ್ಕದಲ್ಲಿ) ಗುಡ್ಡದಿಂದ ಮಿಂಚುಳ್ಳಿ ಜಲಪಾತ ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ಈ ಕಿರು ಜಲಪಾತ ನೋಡಲು ಕೊಮಾರನಹಳ್ಳಿ, ಮಲೇಬೆನ್ನೂರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಜನ ದಾವಿಸುತ್ತಿರುವ ದೃಶ್ಯ ಶನಿವಾರ ಕಂಡು ಬಂತು. ಜಲಪಾತದ ನೀರು ಹರಿದು ಹೋಗಿ ಕೊಮಾರನಹಳ್ಳಿ ಕೆರೆ ಸೇರುತ್ತಿದೆ.
ನೋಡುಗರ ಕಣ್ಮನ ಸೆಳೆಯುವ ಮಿಂಚುಳ್ಳಿ ಪಾಲ್ಸ್
