ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ನಿರ್ದೇಶನ

ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ನಿರ್ದೇಶನ

ಪಂಚ ಗ್ಯಾರಂಟಿ ಯೋಜನೆಗಳ ಸಭೆಯಲ್ಲಿ ಪ್ರಾಧಿಕಾರದ ಹರಿಹರ ತಾಲ್ಲೂಕು ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್  

ಹರಿಹರ, ಅ.13- ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವ ಕೆಲಸವನ್ನು ಮಾಡುವಂತೆ ಪಂಚ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಹರಿಹರ ತಾಲ್ಲೂಕು ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್  ಅಧಿಕಾರಿಗಳಿಗೆ ಹೇಳಿದರು.

ನಗರದ ತಾಪಂ ಕಚೇರಿಯ ಸಭಾಂಗಣದಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು. 

ಯಾವುದೇ ರೀತಿಯ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಜನರಿಗೆ ತಲುಪಬೇಕಾದರೇ, ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಾರ್ಯವೈಖರಿ ಮುಖ್ಯವಾಗಿರುತ್ತವೆ.  ಆದ್ದರಿಂದ   ಲೋಪಗಳು ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಹರಿಹರ ನಗರಕ್ಕೆ ಗುತ್ತೂರು, ದೀಟೂರು, ಸಾರಥಿ, ಗಂಗನಹರಸಿ ಕಡೆಯಿಂದ ಶಾಲಾ-ಕಾಲೇಜುಗಳಿಗೆ ಬರುವಂತ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಬಸ್ ವ್ಯವಸ್ಥೆ ಮಾಡಬೇಕು, ನ್ಯಾಯಬೆಲೆ ಅಂಗಡಿಗಳಲ್ಲಿ ನೀಡುವ ಅಕ್ಕಿ ದುರ್ಬಳಕೆಗೆ ಕಡಿವಾಣ ಹಾಕಬೇಕು. 

ತಾಲ್ಲೂಕಿನಲ್ಲಿ ಗೃಹ ಲಕ್ಷ್ಮಿ ಯೋಜನೆ ಹಣ ಯಾವ ವ್ಯಕ್ತಿಗಳಿಗೆ ತಲುಪಿರುವುದಿಲ್ಲವೋ ಅವರ ಹೆಸರನ್ನು ಪಟ್ಟಿ ಮಾಡಿ ಸರ್ಕಾರಕ್ಕೆ ಪತ್ರವನ್ನು ಹಾಕಿ ಅವರಿಗೂ ಕೂಡ ಆದಷ್ಟು ಬೇಗ ಹಣವನ್ನು ತಲುಪಿಸುವ ಕೆಲಸವನ್ನು ಮಾಡಬೇಕು ಎಂದರು.

ತಾಪಂ ಇಓ ಸುಮಲತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಡಿಪಿಓ ಪೂರ್ಣಿಮಾ ಮಾತನಾಡಿ,  ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 57242 ಅರ್ಜಿಗಳು ಬಂದಿದ್ದು, ಅದರಲ್ಲಿ 52.800 ಅರ್ಜಿದಾರರ ಖಾತೆಗೆ 2 ಸಾವಿರ ಹಣವನ್ನು ಹಾಕಲಾಗಿದೆ. 

ಉಳಿದ 3877 ಅರ್ಜಿಗಳು ತಾಂತ್ರಿಕ ದೋಷ ಸರಿಪಡಿಸಿದ ನಂತರ ಅವರ ಖಾತೆಗೆ ಹಣ ಜಮಾ ಆಗಲಿದೆ, ಅದರಲ್ಲಿ 24 ಜನರು ಮರಣವನ್ನು ಹೊಂದಿದ್ದು 330 ಅರ್ಜಿಗಳನ್ನು ತಡೆಹಿಡಿಯ ಲಾಗಿದೆ ಎಂದು ಹೇಳಿದರು.

ಆಹಾರ ಶಿರಸ್ತೇದಾರ ಮಂಜುನಾಥ್ ಮಾತನಾಡಿ, ಅನ್ನಭಾಗ್ಯ ಯೋಜನೆ ಅಡಿಯಲ್ಲಿ 57690 ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಫಲಾನುಭವಿಗಳ ಖಾತೆಗೆ 340 ಮತ್ತು 170 ರೂಪಾಯಿ ಹಣವನ್ನು ಜಮಾ ಮಾಡಲಾಗಿದೆ. ಪಡಿತರ ಚೀಟಿಗೆ 120 ಹೊಸದಾಗಿ ಅರ್ಜಿಗಳು ಬಂದಿವೆ. ಅಕ್ರಮ ಅಕ್ಕಿ ಸಾಗಾಟ ಮಾಡುವ ವ್ಯಕ್ತಿಗಳ ಮೇಲೆ ಇಲ್ಲಿಯವರೆಗೂ 28 ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದು ಹೇಳಿದರು.  

ಬೆಸ್ಕಾಂ ಇಲಾಖೆ ಅಧಿಕಾರಿ ನಾಗರಾಜ್ ನಾಯ್ಕ್ ಮಾತನಾಡಿ,   ತಾಲ್ಲೂಕಿನಲ್ಲಿ ತಿಂಗಳಿಗೆ 2 ಕೋಟಿ 40 ಲಕ್ಷ ರೂಪಾಯಿ ಉಚಿತ ವಿದ್ಯುತ್ ಬಿಲ್ ಪಾವತಿ ಮಾಡ ಲಾಗಿದ್ದು,  ಇದುವರೆಗೂ 33 ಕೋಟಿ 81 ಲಕ್ಷ ರೂಪಾಯಿ ಪಾವತಿ ಮಾಡಲಾಗಿದೆ. ಇತ್ತೀಚೆಗೆ ಸರ್ಕಾರದ 100 ಪ್ಲಸ್ 10 ಯೂನಿಟ್‌ಗೆ ಮಾತ್ರ ಉಚಿತ ನೀಡುತ್ತಿದ್ದು, 200 ಯೂನಿಟ್ ಹೆಚ್ಚು ವಿದ್ಯುತ್ ಬಳಕೆ ಮಾಡಿದರೆ ಪೂರ್ಣ ಪ್ರಮಾಣದಲ್ಲಿ ಹಣವನ್ನು ಕಟ್ಟಿಸಿಕೊಳ್ಳುವಂತೆ,   100 ರೂಪಾಯಿ ಬಾಕಿ ಇದ್ದರೂ ಸಹ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ  ಆದೇಶವನ್ನು ನೀಡಲಾಗಿದೆ ಎಂದು ಹೇಳಿದರು. 

ಕೆ.ಎಸ್.ಆರ್.ಟಿ.ಸಿ. ಅಧಿಕಾರಿ ಹನುಮಂತಪ್ಪ ಮಾತನಾಡಿ,  ತಾಲ್ಲೂಕಿನಲ್ಲಿ ಮೊದಲು 116 ಬಸ್ ರೂಟ್ ಇದ್ದವು, ಈಗ ಅದನ್ನು 136 ಕ್ಕೆ ಏರಿಸಲಾಗಿದೆ. ಹರಿಹರ ಡಿಪೋ ವ್ಯಾಪ್ತಿಯಲ್ಲಿ ಬರುವ ವಾಹನಗಳಿಂದ ತಿಂಗಳಲ್ಲಿ 1  ಕೋಟಿ  38 ಲಕ್ಷದ 68 ಸಾವಿರ ರೂಪಾಯಿ ಆಗಿದ್ದು, ಇಲ್ಲಿಯವರೆಗೂ 50 ಕೋಟಿ 92 ಲಕ್ಷ ರೂಪಾಯಿ  ಮಹಿಳೆಯರ ಉಚಿತ ಪ್ರಯಾಣಕ್ಕೆ ಖರ್ಚು ಆಗಿದೆ ಎಂದು ಹೇಳಿದರು. 

ವಿದ್ಯಾನಿಧಿ ಯೋಜನೆಯಿಂದ   2287 ಪದವಿ  ಮತ್ತು ಡಿಪ್ಲೋಮಾ ಮಾಡಿರುವ  18  ವಿದ್ಯಾರ್ಥಿಗಳಿಗೆ  ಒಟ್ಟು 4 ಕೋಟಿ 75 ಲಕ್ಷದ 65 ಸಾವಿರ ರೂಪಾಯಿ   ಹಣವನ್ನು  ಖಾತೆಗೆ ಜಮಾ ಮಾಡಲಾಗಿದೆ ಎಂದು  ಇಲಾಖಾ ಅಧಿಕಾರಿ ರವೀಂದ್ರ ಹೇಳಿದರು.   

ಈ ಸಂದರ್ಭದಲ್ಲಿ  ಗ್ಯಾರಂಟಿ ಯೋಜನೆ  ಅನುಷ್ಠಾನ ಸಮಿತಿ ನಿರ್ದೇಶಕರಾದ ಸಂತೋಷ ನೋಟದರ್,  ಹೆಚ್ ವಿಶ್ವನಾಥ್, ವೈ.ಎಸ್. ಶಂಕರ್, ಎಂ‌ ಮಂಜುನಾಥ್, ಜಿ‌. ಕೃಷ್ಣಪ್ಪ, ಪಿ.ಆರ್. ನವೀನ್, ಎ.ಬಿ. ಚಂದ್ರಪ್ಪ, ಸಚ್ಚಿನ್ ಕೊಂಡಜ್ಜಿ, ಹಬೀಬುಲ್ಲಾ ಬೇಗ್ , ಸವಿತಾ ನಾಯ್ಕ್,  ಜೆ.ಪಿ. ಪಕ್ಕಿರೇಶ್, ವೈ.ಎನ್. ನಾಗರಾಜ್ , ಮುಖಂಡರಾದ ಎಂ. ಬಿ. ಅಭಿದಾಲಿ, ಕಮಲಪುರ ಮಲ್ಕೇಶ್ ಮತ್ತು ತಾಪಂ ಸಿಬ್ಬಂದಿಗಳು ಹಾಜರಿದ್ದರು.  

error: Content is protected !!