ಹಿರೇಗೋಣಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕೆ.ಬಸವಣ್ಯಪ್ಪ ಕಂಬ್ಯೆಣ್ಣ

ಹಿರೇಗೋಣಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕೆ.ಬಸವಣ್ಯಪ್ಪ ಕಂಬ್ಯೆಣ್ಣ

ಹೊನ್ನಾಳಿ, ಅ. 7 – ತಾಲ್ಲೂಕಿನ ಹಿರೇಗೋಣಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕೆ. ಬಸವಣ್ಯಪ್ಪ ಕಂಬ್ಯೆಣ್ಣ ಆಯ್ಕೆಯಾದರು. ನಿಕಟ ಪೂರ್ವ ಅಧ್ಯಕ್ಷರಾಗಿದ್ದ ಸೋಮಪ್ಪ ಅವರು ನೀಡಿದ್ದ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಿತು. 

ಇತರೆ ಯಾವುದೇ ನಾಮಪತ್ರ ಸಲ್ಲಿಕೆಯಾಗದಿದ್ದರಿಂದ ಕೆ. ಬಸವಣ್ಯಪ್ಪ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಾಸ್ವೇಹಳ್ಳಿ ನೀರಾವರಿ ಭದ್ರಾ ನಾಲಾ ಉಪವಿಭಾಗದ ಎಇಇ ಪ್ರವೀಣ್ ಘೋಷಿಸಿದರು.

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಸೋಮಪ್ಪ, ಉಪಾಧ್ಯಕ್ಷರಾದ ಶಮೀನಾಬಾನು, ಸದಸ್ಯ ಗೀತಮ್ಮ, ಎಚ್.ವಿ. ನಾಗಪ್ಪ, ಟಿ. ಅನಿತಾ, ಡಿ.ಎಂ. ಮಧು, ಎಂ.ಎನ್. ಜ್ಯೋತಿ, ನಸ್ರೀನ್ ಬಾನು, ಲಲಿತಾ ಬಾಯಿ, ಎಸ್. ರವಿಕುಮಾರ್,  ಎಂ.ಟಿ. ಮಂಜಪ್ಪ, ಎ.ಕೆ. ಹನುಮಂತಪ್ಪ, ಮಂಜಮ್ಮ, ನಾಗರಾಜ್, ಎಚ್.ಎಸ್. ನಾಗರತ್ನ ಉಪಸ್ಥಿತರಿದ್ದರು.

error: Content is protected !!