ಹರಪನಹಳ್ಳಿ, ಅ. 7- ದೇಶವು ಈಗ ಎಲ್ಲಾ ದೃಷ್ಟಿಯಿಂದಲೂ ಬಲಾಢ್ಯವಾಗುತ್ತಿದ್ದು, ಎಲ್ಲರೂ ಹೆಚ್ಚು ಸದಸ್ಯತ್ವ ನೋಂದಾಯಿಸಿ ಬಿಜೆಪಿಯನ್ನು ಸದೃಢಗೊಳಿ ಸೋಣ ಎಂದು ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಹೇಳಿದರು.
ಹಿರೇಮೇಗಳಗೆರೆ, ಕಂಚಿಕೇರಿ, ಕಡಬಗೇರಿ ಮತ್ತು ಚಿಗಟೇರಿ ಮಹಾಶಕ್ತಿ ಕೇಂದ್ರಗಳಲ್ಲಿ ಭಾರತೀಯ ಜನತಾ ಪಾರ್ಟಿ ಹರಪನಹಳ್ಳಿ ಮಂಡಲದ ವತಿಯಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತೀ ಬೂತ್ ಮಟ್ಟದಲ್ಲಿ ಹೆಚ್ಚು ಸದಸ್ಯ ರನ್ನು ನೋಂದಾಯಿಸಬೇಕು. ಯಾವುದೇ ಚುನಾ ವಣೆಯಲ್ಲಿ ಸ್ಪರ್ಧೆಗೆ ಟಿಕೆಟ್ ಬಯಸಿದರೆ ಅವರು ಕನಿಷ್ಠ 100 ಸದಸ್ಯರನ್ನು ನೋಂದಾಯಿ ಸಿರಬೇಕು, ಇದು ಪಕ್ಷದ ಮಾನದಂಡವಾಗಿದೆ ಎಂದರು.
ಜಾಗತಿಕ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ಉನ್ನತ ಮಟ್ಟಕ್ಕೆ ತಂದಿದ್ದಾರೆ. ರಷ್ಯಾ ಮತ್ತು ಉಕ್ರೇನ್ ಯುದ್ದದ ಸಂದರ್ಭದಲ್ಲಿ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳನ್ನು ನಮ್ಮ ದೇಶಕ್ಕೆ ಕರೆಸುವ ಸಲು ವಾಗಿ ಎರಡು ದೇಶಗಳಿಗೆ ಯುದ್ಧ ನಿಲ್ಲಿಸುವಂತೆ ಸೂಚಿಸಿದಾಗ, 2 ದಿನ ಯುದ್ಧ ನಿಲ್ಲಿಸಿದರು, ಇದು ಮೋದಿಯವರ ತಾಕತ್ತು ಎಂದ ಅವರು, ಈ ಅಭಿಯಾನದಲ್ಲಿ ವಿದ್ಯಾವಂತ ಯುವಕರು ಹೆಚ್ಚು ಭಾಗವಹಿಸಿ ಎಂದು ಕರೆಕೊಟ್ಟರು,
ರಾಜ್ಯ ಸೌಹಾರ್ದ ಬ್ಯಾಂಕ್ನ ಅಧ್ಯಕ್ಷ ಜಿ.ನಂಜನಗೌಡ್ರು ಮಾತನಾಡಿ, ರಾಜ್ಯದಲ್ಲಿ ಒಂದು ತಿಂಗಳ ಕಾಲ ಅಭಿಯಾನ ಯಶಸ್ವಿಯಾಗಿ ನಡೆದಿದ್ದು, ಈವರೆಗೆ 45 ಲಕ್ಷ ಮಂದಿ ಸದಸ್ಯತ್ವ ಪಡೆದಿದ್ದಾರೆ. ರಾಜ್ಯದಲ್ಲಿ ಒಟ್ಟು 1.50 ಕೋಟಿ ಸದಸ್ಯತ್ವ ನೋಂದಣಿ ಗುರಿ ಹಾಕಿಕೊಂಡಿದೆ ಎಂದರು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಕೆ.ಲಕ್ಷ್ಮಣ ಮಾತನಾಡಿ, ಬಿಜೆಪಿ ಯಾವುದೇ ಸಮುದಾಯದ ವಿರುದ್ಧ ಅಲ್ಲ, ದೇಶವನ್ನು ಸುರಕ್ಷಿತವಾಗಿಡುವುದು ನಮ್ಮ ಉದ್ದೇಶವಾಗಿದೆ.ಪಕ್ಷದ ಸದಸ್ಯತ್ವ ಅಭಿಯಾನ ರಾಷ್ಟ್ರ ನಿರ್ಮಾಣಕ್ಕೆ ಬುನಾದಿಯಾಗಲಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಬೂತ್ ಮಟ್ಟದಿಂದ ಕೆಲಸ ಮಾಡಬೇಕು ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಹರಪನಹಳ್ಳಿ ಮಂಡಲ ಉಸ್ತುವಾರಿ ಬ್ಯಾಲುಣಸಿ ರಾಮಣ್ಣ, ಜಿಲ್ಲಾ ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಣಿವಿಹಳ್ಳಿ ಮಂಜುನಾಥ, ಮಂಡಲ ಪ್ರಧಾನ ಕಾರ್ಯದರ್ಶಿ ಎ.ಉದಯ ಕುಮಾರ್, ಬಿ.ವೈ. ವೆಂಕಟೇಶ್ ನಾಯ್ಕ್, ಸಂಚಾ ಲಕರಾದ ಎಂ.ಶಂಕರ್, ಸಂಗಮೇಶ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.