ಮಾ.ಸ.ಬ ಕಾಲೇಜು ಕಾರ್ಯಾಗಾರದಲ್ಲಿ ಪ್ರಾಧ್ಯಾಪಕ ಡಾ.ಚಂದ್ರಶೇಖರ್
ದಾವಣಗೆರೆ, ಅ.7- ಸಮಾಜ ವಿಜ್ಞಾನ ಮತ್ತು ನೈಸರ್ಗಿಕ ವಿಜ್ಞಾನಗಳ ವ್ಯತ್ಯಾಸದ ಕುರಿತಾಗಿ ಚರ್ಚಿಸಿ, ಇಂದಿನ ಯುವ ಪೀಳಿಗೆಗೆ ಸಮಾಜಶಾಸ್ತ್ರದ ಅರಿವನ್ನು ಮೂಡಿಸುವುದು ಅಗತ್ಯವಾಗಿದೆ ಎಂದು ಕುವೆಂಪು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಚಂದ್ರಶೇಖರ್ ತಿಳಿಸಿದರು.
ನಗರದ ಮಾ.ಸ.ಬ. ಕಲಾ ಮತ್ತು ವಾಣಿಜ್ಯ ಕಾಲೇಜು ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯ ಪದವಿ ಸಮಾಜ ಶಾಸ್ತ್ರ ಅಧ್ಯಾಪಕರ ಸಂಘ ಇವರ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಕ್ಷತೆಯನ್ನು ಮಾ.ಸ.ಬ ಕಲಾ ಮತ್ತು ವಾಣಿಜ್ಯ ಕಾಲೇಜು ಪ್ರಾಂಶುಪಾಲರಾದ ಪ್ರೊ. ಜಿ. ಸಿ. ನೀಲಾಂಬಿಕ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ವಿ.ವಿ. ಹಾಗೂ ಕಾಲೇಜು ಅಧ್ಯಾಪಕರ ಸಂಘಗಳ ಒಕ್ಕೂಟದ ಮಾಜಿ ಅಧ್ಯಕ್ಷ ಪ್ರೊ. ಸಿ. ಹೆಚ್. ಮುರಿಗೇಂದ್ರಪ್ಪ ಮಾತನಾಡುತ್ತಾ, ಸ್ಪರ್ಧಾತ್ಮಕ ಸಮಾಜದಲ್ಲಿ, ಸಮಾಜ ವಿಜ್ಞಾನಗಳ ಪ್ರಾಮುಖ್ಯತೆ ಕುರಿತು ವಿವರಿಸಿದರು.
ಕಾರ್ಯಾಗಾರದಲ್ಲಿ ಎರಡು ವಿಚಾರಗೋಷ್ಠಿಗಳನ್ನು ಏರ್ಪಡಿಸಲಾಗಿತ್ತು. ಮೊದಲನೇ ಗೋಷ್ಠಿ ಪ್ರೊ. ಯಶೋಧಮ್ಮನವರ ಅಧ್ಯಕ್ಷತೆಯಲ್ಲಿ ನಡೆಯಿತು. ಡಾ. ಟಿ. ಮಂಜುಳ, ಡಾ. ಎಸ್. ಎಂ. ಲತಾ, ಪ್ರೊ. ಟಿ. ಬಿ. ಜ್ಯೋತಿ ಭಾಗವಹಿಸಿದ್ದರು.
ಎರಡನೇ ಗೋಷ್ಠಿಯಲ್ಲಿ ಡಾ. ಸಿದ್ದಪ್ಪ. ಡಿ. ಓ., ಡಾ. ಶ್ಯಾಮರಾಜ್ ಟಿ., ಆನಂದ್. ಎಸ್ ಅವರುಗಳು 2ನೇ ಸೆಮಿಸ್ಟರ್ ಅಧ್ಯಾಯಗಳ ಚರ್ಚೆ ನಡೆಸಿದರು. ಅಧ್ಯಕ್ಷತೆಯನ್ನು ಡಿ. ಧರಣೇಂದ್ರಯ್ಯ ವಹಿಸಿದ್ದರು.
ಡಾ. ರಾಘವೇಂದ್ರ ಆರ್. ಪ್ರಾಸ್ತಾವಿಕ ನುಡಿಗಳನ್ನಾ ಡಿದರು. ಡಾ. ಮಂಜಪ್ಪ. ಎಂ ನಿರೂಪಿಸಿದರು, ಡಾ. ಹೆಚ್ ತಿಪ್ಪೇ ಸ್ವಾಮಿ ಗೋಷ್ಠಿಗಳನ್ನು ನಿರೂಪಿಸಿದರು. ಕು. ಸುನೀತಾ ಪ್ರಾರ್ಥಿಸಿದರು. ಡಾ. ಜಿ.ಆರ್. ನವೀನ್ ವಂದಿಸಿದರು.