ದಾವಣಗೆರೆ, ಅ. 6- ದಾವಣಗೆರೆ ಚೆಸ್ ಕ್ಲಬ್ ವತಿಯಿಂದ ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಇವರ ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ್ ರಾಜಕುಮಾರ್ ಅವರ ಸವಿನೆನಪಿಗಾಗಿ ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಪ್ರಥಮ ಬಾರಿಗೆ ರಾಷ್ಟ್ರಮಟ್ಟದ ಫಿಡೇ ರೇಟಿಂಗ್ ಓಪನ್ ರಾಪಿಡ್-‘ಪುನಿತ್ ರಾಜಕುಮಾರ್ ಕಪ್’ ಸೀಸನ್-3 ಚದುರಂಗ ಸ್ಪರ್ಧೆಯಲ್ಲಿ ಮೈಸೂರಿನ ಬಾಲಕೃಷ್ಣ ಅವರು ಪುನೀತ್ ರಾಜಕುಮಾರ್ ಕಮ್ ಪ್ರಶಸ್ತಿ ಪಡೆದರು.
ದ್ವಿತೀಯ ಸ್ಥಾನದಲ್ಲಿ ತುಮಕೂರಿನ ಸೇಟ್ ಪ್ರಜ್ವಲ್, ತೃತೀಯ ಸ್ಥಾನವನ್ನು ತಮಿಳುನಾಡಿನ ಇಂಟರ್ ನ್ಯಾಷನಲ್ ಮಾಸ್ಟರ್ಬ್ರ ಬಾಲಸುಬ್ರಮಣ್ಯ, ಕೇರಳದ ಮಾರ್ತಂಡನ್ ಕೆ.ಯು., ಐದನೇ ಸ್ಥಾನವನ್ನು ಶಿವಮೊಗ್ಗದ ಚಿರಂತ್ ಎಂ. ಡಿ. ಪ್ರಶಸ್ತಿ ಪಡೆದರು.
ಪ್ರಥಮ ಬಹುಮಾನ `ಪುನಿತ್ ಪ್ರತಿಮೆ’ಯ ಟ್ರೋಫಿಯ ಜೊತೆಗೆ ರೂ.25,000/-ಗಳ ನಗದು ಬಹುಮಾನ ಮತ್ತು ದ್ವಿತೀಯ ಬಹುಮಾನ ರೂ.15,000/- ಹಾಗೂ ಟ್ರೋಫಿ, ತೃತೀಯ ಬಹುಮಾನ ರೂ.10.000/- ಗಳು ನಗದು, 4ನೇ ಬಹುಮಾನ ರೂ.7,000/-ಗಳು ನಗದು, 5ನೇ ಬಹುಮಾನ ರೂ.5,000/-ಗಳು ನಗದು, 6ನೇ ರಿಂದ 10ನೇ ಸ್ಥಾನ ಪಡೆಯುವ ಕ್ರೀಡಾಪಟುವಿಗೆ ರೂ.3,000/- ಗಳು ನಗದು, 11 ರಿಂದ 15ನೇ ಸ್ಥಾನ ಪಡೆಯುವ ಕ್ರೀಡಾಪಟುವಿಗೆ ರೂ.2,000/- ಗಳು ನಗದು, 16 ರಿಂದ 30ನೇ ಸ್ಥಾನ ಪಡೆಯುವ ಕ್ರೀಡಾಪಟುವಿಗೆ ರೂ.1.000/- ಗಳು ನಗದು 17 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಪ್ರಥಮ ಬಹುಮಾನ ರೂ.2,000/- ಮತ್ತು ಟ್ರೋಫಿ, ದ್ವಿತೀಯ ಬಹುಮಾನ ರೂ.1,500/- ಹಾಗೂ ಟ್ರೋಫಿ, ತೃತೀಯ ಬಹುಮಾನ ರೂ.1,000/- ಗಳು ನಗದು ಮತ್ತು ಟ್ರೋಫಿ, 4ನೇ ರಿಂದ 10ನೇ ಸ್ಥಾನ ಪಡೆಯುವ ಮಹಿಳಾ ಕ್ರೀಡಾಪಟುವಿಗೆ ಟ್ರೋಫಿ 49 ಮತ್ತು 59 ವರ್ಷ ಮೇಲ್ಪಟ್ಟ ವಯಸ್ಕ ಕ್ರೀಡಾಪಟುಗಳಿಗೆ ಪ್ರಥಮ ಬಹುಮಾನ ರೂ.2,000/- ಮತ್ತು ಟ್ರೋಫಿ, ದ್ವಿತೀಯ ಬಹುಮಾನ ರೂ.1,500/- ಹಾಗೂ ಟ್ರೋಫಿ, ತೃತೀಯ ಬಹುಮಾನ ರೂ. 1,000/- ಗಳು ನಗದು ಮತ್ತು ಟ್ರೋಫಿ, 4ನೇ ರಿಂದ 10ನೇ ಸ್ಥಾನ ಪಡೆಯುವ ಹಿರಿಯ ಕ್ರೀಡಾಪಟುವಿಗೆ ವಿಶೇಷ ಬಹುಮಾನವಾಗಿ ಟ್ರೋಫಿ ನೀಡಲಾಯಿತು.
ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ಶಿವಗಂಗಾ ಶ್ರೀನಿವಾಸ್, ಕಾಂಗ್ರೆಸ್ ಮುಖಂಡ ಆನಂದಪ್ಪ, ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಜಿ. ಉಳುವಯ್ಯ, ಮಹಾನಗರ ಪಾಲಿಕೆ ಸದಸ್ಯರಾದ ಗಡಿಗುಡಾಳ್ ಮಂಜುನಾಥ್, ಎ. ನಾಗರಾಜ್ ಅವರುಗಳು ಭಾಗವಹಿಸಿದ್ದರು.
ಮುಖಂಡರುಗಳಾದ ಸುರಭಿ ಶಿವ ಮೂರ್ತಿ, ಹುಲ್ಲುಮನೆ ಗಣೇಶ್, ನಲ್ಲೂರು ರಾಘವೇಂದ್ರ, ಕಣ್ಣಾಳ್ ಅಂಜಿನಪ್ಪ, ಸಾಗರ್ ಎಲ್.ಎಂ.ಹೆಚ್., ಶಿವರತನ್, ಪ್ರವೀಣ್ ಭೋವಿ, ಮಧು ಪವಾರ್, ರಾಜು ಭಂಡಾರಿ, ಶ್ರೀಕಾಂತ ಬಗರೆ ಹಾಗೂ ಪಂದ್ಯಾವಳಿಯ ಪ್ರಾಯೋಜಕರಾದ ಜೈನ್ ಟ್ರಿನಿಟಿ ಕಾಲೇಜಿನ ಮುಖ್ಯಸ್ಥರಾದ ವಿಜಯ ಜೈನ್, ಮಂಗಳ ಜ್ಯೋತಿ ವಿದ್ಯಾಸಂಸ್ಥೆ ಜೆ.ಹೆಚ್. ಪಟೇಲ್ ಕಾಲೇಜಿನ ಮುಖ್ಯಸ್ಥ ಮುಸ್ತಫಾ, ಎ.ಪಿ.ಎಸ್. ದಾವಣಗೆರೆ ಡಿಸ್ಟ್ರಿಬ್ಯೂಟರ್ ಶಿವಕುಮಾರ್, ಜಿಲ್ಲಾ ಚೆಸ್ ಅಸೋಸಿಯೇಷನ್ ಕಾರ್ಯದರ್ಶಿ ಯುವರಾಜ್ ಮತ್ತು ಮಂಜುಳಾ ಯುವರಾಜ್ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.