ದಾವಣಗೆರೆ, ಅ.6- ನಗರದ ಮುಸ್ಲಿಮ್ ಎಜುಕೇಷನ್ ಫಂಡ್ ಅಸೋಸಿಯೇಷನ್ ವಸತಿ ನಿಲಯದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಔಖಾಫ್ ಮಂಡಳಿ ವತಿಯಿಂದ ಏರ್ಪಡಿಸಿದ್ದ ಮಹಿಳಾ ಕಾಲೇಜು ಮಂಜೂರಾತಿ, ಉಚಿತ ಆಂಬ್ಯುಲೆನ್ಸ್ ಹಾಗೂ ದಾವಣಗೆರೆ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಪ್ರಮುಖ ಮಸೀದಿಗಳಿಗೆ ತಲಾ ಒಂದರಂತೆ ಡೆಡ್ ಬಾಡಿ ಫ್ರೀಜರ್ ವಿತರಣಾ ಕಾರ್ಯಕ್ರಮ ದಲ್ಲಿ ಡೆಡ್ ಬಾಡಿ ಫ್ರೀಜರನ್ನು ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ವಿತರಿಸಿದರು.
ಈ ವೇಳೆ ಮಾತನಾಡಿದ ಅವರು, ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಮಹಿಳಾ ಕಾಲೇಜ್ ಮಂಜೂರಾತಿ ಆಗಿದ್ದು , ಎಲ್ಲರೂ ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ವಿಧಾನಪರಿಷತ್ ಸದಸ್ಯರಾದ ಕೆ. ಅಬ್ದುಲ್ ಜಬ್ಬಾರ್, ಬಲ್ಕೀಸ್ ಬಾನು, ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಡಾ|| ಕೆ. ಅನ್ವರ್ ಬಾಷಾ, ಚಿತ್ರದುರ್ಗ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಇಕ್ಬಾಲ್ ಹುಸೇನ್, ಜಿಲ್ಲಾ ವಕ್ಫ್ ಅಧಿಕಾರಿ ಸೈಯದ್ ಮೊಅಜಂ ಪಾಷ, ರಾಜ್ಯ ವಕ್ಫ್ ಪರಿಷತ್ತು ಸದಸ್ಯ ಅಬ್ದುಲ್ ಘನಿ ತಾಹಿರ್, ವಕ್ಫ್ ನಿರೀಕ್ಷಕ ಸೈಯದ್ ಜಾಕೀರ್ ಹುಸೇನ್, ಮಸೀದಿಗಳ ಮುತುವಲ್ಲಿಗಳು, ಮುಸ್ಲಿಮ್ ಮುಖಂಡರು ಹಾಗೂ ಸಮಾಜದವರು ಉಪಸ್ಥಿತರಿದ್ದರು.