ದಾವಣಗೆರೆ, ಅ. 6- ದಾವಣಗೆರೆ ಮಹಾನಗರ ಪಾಲಿಕೆ ನೌಕರ ಸಂಘದ ವತಿಯಿಂದ ವಯೋ ನಿವೃತ್ತಿ ಹೊಂದಿದ ಪ್ರಥಮ ದರ್ಜೆ ಸಹಾಯಕ ಹೆಚ್. ನಾಗರಾಜ್, ಪೌರ ಕಾರ್ಮಿಕರಾದ ಶ್ರೀಮತಿ ಮೈಲಮ್ಮ, ತೋಟಗಾರಿಕೆ ಶಾಖೆಯ ಶ್ರೀಮತಿ ಈರಮ್ಮ ಇವರುಗಳನ್ನೂ ಸಹ ಸನ್ಮಾನಿಸಿ, ಗೌರವಿಸ ಲಾಯಿತು. ಈ ಸಂದರ್ಭದಲ್ಲಿ ಉಪ ಆಯುಕ್ತರಾದ ಶ್ರೀಮತಿ ಲಕ್ಷ್ಮಿ, ಪಾಲಿಕೆ ನೌಕರ ಸಂಘದ ಅಧ್ಯಕ್ಷ ಕೆ.ಎಸ್. ಗೋವಿಂದರಾಜು, ಪದಾಧಿಕಾರಿಗಳಾದ ಟಿ.ಸಿ. ಬಸವರಾಜಯ್ಯ, ಶ್ರೀಮತಿ ನಾಗರತ್ನಮ್ಮ, ಎಸ್.ಕೆ. ಪಾಂಡುರಾಜ್ ಸೇರಿದಂತೆ ಅಧಿಕಾರಿಗಳು ಮತ್ತು ನೌಕರರು ಉಪಸ್ಥಿತರಿದ್ದರು.
January 8, 2025