ಹರಪನಹಳ್ಳಿ : ಅರ್ಥಪೂರ್ಣ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವಕ್ಕೆ ತೀರ್ಮಾನ

ಹರಪನಹಳ್ಳಿ : ಅರ್ಥಪೂರ್ಣ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವಕ್ಕೆ ತೀರ್ಮಾನ

ಹರಪನಹಳ್ಳಿ, ಅ. 4 – ಇದೇ ದಿನಾಂಕ 17 ರಂದು ನೆಡಯಲಿರುವ  ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ತಪ್ಪದೇ ಭಾಗವಹಿಸ ಬೇಕು ಎಂದು  ತಹಶೀಲ್ದಾರ್‌ ಹೇಳಿದರು.  

ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಕರೆಯಲಾಗಿದ್ದ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾ ಡಿದ ಅವರು, ತಾಲ್ಲೂಕಿನಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ವಾಲ್ಮೀಕಿ ನಾಯಕ ಸಮುದಾಯವರು ತಮ್ಮ ತಮ್ಮ ಹಳ್ಳಿ ಯಲ್ಲಿ ಯಾವ ದಿನವಾದರೂ ಜಯಂತಿಯನ್ನು ಆಚರಿಸಿ ಕೊಳ್ಳಿ, ಆದರೆ ಸರ್ಕಾರದಿಂದ ಆಚರಣೆ ಮಾಡುವ ಜಯಂತಿಗೆ ಬಂದು ಭಾಗವಹಿಸುವಂತೆ ಕರೆ ನೀಡಿದರು.

ಸಮಾಜದ ಹಿರಿಯ ಕಲಾವಿದರು, ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದು ಅವರು ತಿಳಿಸಿದರು. ಅಂದು ಬೆಳಿಗ್ಗೆ 10 ಗಂಟೆಗೆ ಅರಸಿಕೇರಿ ರಸ್ತೆಯ ಬಳಿ ಇರುವ ವಾಲ್ಮೀಕಿ ಸಮುದಾಯದಿಂದ ಮೆರವಣಿಗೆ ಮೂಲಕ ಹಿರೇಕೆರೆಯ ವೃತ್ತವನ್ನು ಒಳಗೊಂಡು ಹೊಸಪೇಟೆ ರಸ್ತೆಯ ಮೂಲಕ ಪ್ರವಾಸಿ ಮಂದಿರದವರೆಗೆ ಆಚರಿಸಲು ನಿರ್ಣಯಿಸಲಾಯಿತು. ನಂತರ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹರ್ಷಿ ವಾಲ್ಮೀಕಿ ಕುರಿತು ವಿಶೇಷ ಉಪನ್ಯಾಸ ನೀಡಲಾಗುವುದು ಎಂದರು.

ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ವೈ.ಡಿ. ಅಣಪ್ಪ  ಮಾತನಾಡಿ,  ಮಹರ್ಷಿ ವಾಲ್ಮೀಕಿ ಜಯಂತಿಗೆ ತಾಲ್ಲೂಕಿನ ವಾಲ್ಮೀಕಿ ನಾಯಕ ಬಂಧುಗಳು ಕಡ್ಡಾಯವಾಗಿ ಭಾಗವಹಿಸುವ ಮೂಲಕ ಅರ್ಥಪೂರ್ಣ ಕಾರ್ಯಕ್ರಮ ಮಾಡಲು ಪ್ರತಿಯೊಬ್ಬರ ಸಹಕಾರ ಬಹುಮುಖ್ಯ ಎಂದರು.

ಸಮಾಜ ಕಲ್ಯಾಣ ಅಧಿಕಾರಿ ಗಂಗಪ್ಪ, ತಾಲ್ಲೂಕು ಪಂಚಾಯತಿ  ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ್, ಅಭಿಯಂತರ ಕುಬೇಂದ್ರನಾಯ್ಕ್,  ಪರಿಶಿಷ್ಟ ಪಂಗಡ ಕಲ್ಯಾಣ ಅಧಿಕಾರಿ ಇಬ್ರಾಹಿಂ, ವಾಲ್ಮೀಕಿ ನಾಯಕ ಸಮಾಜದ ಮಾಜಿ ಅಧ್ಯಕ್ಷ ಕೆ. ಉಚ್ಚೆಂಗೆಪ್ಪ, ಮುಖಂಡರಾದ  ನಾಗರಾಜ, ಗಿರಜ್ಜಿ ಶಿವಾನಂದ, ವಾಗೀಶ ವಕೀಲರು, ರೇವಣಸಿದ್ದಪ್ಪ, ಸುರೇಶ್ ಮಂಡಕ್ಕಿ, ಅಂಜಿನಪ್ಪ  ತೆಲಗಿ,  ಶಿವಪ್ಪ ತೆಲಿಗಿ, ಶಿವರಾಜ್, ಪ್ರಕಾಶ, ಆರ್. ಮಂಜುಳಾ, ಪದ್ಮಾವತಿ ಗುಂಡಗತ್ತಿ, ನೇತ್ರಾವತಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

error: Content is protected !!