ಸಾಹಿತ್ಯದ ಗಡಿಯಾರ ಸರಿಪಡಿಸುವುದು ಕಷ್ಟದ ಕೆಲಸ : ಸಂಜೀವ ಶಿರಹಟ್ಟಿ

ಸಾಹಿತ್ಯದ ಗಡಿಯಾರ ಸರಿಪಡಿಸುವುದು ಕಷ್ಟದ ಕೆಲಸ : ಸಂಜೀವ ಶಿರಹಟ್ಟಿ

ರಾಣೇಬೆನ್ನೂರು, ಅ.4-  ಸಾಹಿತ್ಯದ ಗಡಿಯಾರ ಸರಿಪಡಿಸುವುದು ಕಷ್ಟದ ಕೆಲಸ. ಗಡಿಯಾರದಲ್ಲಿ ಎರಡೇ ಮುಳ್ಳು ಒಂದಕ್ಕೊಂದು ಅನುಸರಿಸಿ ನಡೆಯುತ್ತವೆ. ಆದರೆ ಸಾಹಿತ್ಯ ಕ್ಷೇತ್ರದಲ್ಲಿ ಮುಳ್ಳುಗಳು ಅನೇಕ, ಹೊಂದಿಸಿಕೊಂಡು ಹೋಗುವುದು ಕಷ್ಟದ ಕೆಲಸ ಎಂದು ಸಂಜೀವ ಶಿರಹಟ್ಟಿ ಹೇಳಿದರು.

ನಗರದ ಕರ್ನಾಟಕ ಸಂಘದಲ್ಲಿ ಶುಕ್ರವಾರ 88 ನೇಯ ವರ್ಷದ ನಾಡಹಬ್ಬದ ಎರಡನೇಯ ದಿನದ ಸಭಾ ಕಾರ್ಯಕ್ರಮದಲ್ಲಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವೃತ್ತಿ ಮತ್ತು ಪ್ರವೃತ್ತಿಗಳನ್ನು ಹೊಂದಿಸಿಕೊಂಡು ಹೋಗುವುದು ಕಷ್ಟದ ಕೆಲಸ. ಆದರೂ, ಪ್ರವೃತ್ತಿಗೆ ಒಂದಿಷ್ಟು ಸಮಯ ಮೀಸಲಿಟ್ಟರೆ ಜೀವನ ಸುಂದರವಾಗಿರುತ್ತದೆ ಎಂದರು. 

ರಾಣೇಬೆನ್ನೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಭಾಕರ ಶಿಗ್ಲಿ ಮಾತನಾಡಿ, ಕ.ಸಾ.ಪ. ಮತ್ತು ಕರ್ನಾಟಕ ಸಂಘದ ಸಮನ್ವಯದೊಂದಿಗೆ ಉಭಯ ಕಾರ್ಯಕ್ರಮಗಳ ಮೂಲಕ ಕನ್ನಡ ಸೇವೆ ಮಾಡುತ್ತಾ ಬಂದಿದ್ದು, ನನ್ನ ಅಧ್ಯಕ್ಷತೆಯಲ್ಲಿಯೂ ಈ ಪರಿಪಾಠ ಮುಂದುವರೆಸಿಕೊಂಡು ಹೋಗುವುದಾಗಿ ಅವರು ಹೇಳಿದರು.

ಸಭಾ ಕಾರ್ಯಕ್ರಮದ ನಂತರ ಬೆಳಗಾವಿಯ ಉದಯೋನ್ಮಖ
ಹಿಂದೂ ಸ್ತಾನಿ ಗಾಯಕಿ ಸ್ನೇಹಾ ಕುಲಕರ್ಣಿ ನಡೆಸಿಕೊಟ್ಟ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ವೀಕ್ಷಕರನ್ನು ಹಿಡಿದಿಟ್ಟು ಕೊಳ್ಳುವಲ್ಲಿ ಯಶಸ್ವಿಯಾಯಿತು.

ಶ್ರೀನಿಧಿ ಶಿರಹಟ್ಟಿ ನಾಡಗೀತೆ ಹಾಡಿದರು, ವಿಭಾ ಜೋಶಿ ಸ್ವಾಗತಿಸಿದರು, ಅಭಿನಂದನ ಜೋಶಿ ವಂದಿಸಿದರು, ಶ್ರೀಲಕ್ಷ್ಮಿ ಅಡಿಕಿ ಕಾರ್ಯಕ್ರಮ ನಿರೂಪಿಸಿದರು.

error: Content is protected !!