ಮಲೇಬೆನ್ನೂರು, ಅ. 4- ನಿನ್ನೆ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಮತ್ತು ಅಮ್ಮನ ಹೆಸರಿನಲ್ಲಿ ಒಂದು ಗಿಡ ನೆಡುವ ಹಾಗೂ ಪ್ಲಾಸ್ಟಿಕ್ ಮುಕ್ತ ಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿರುವ ಕೊಮಾರನಹಳ್ಳಿಯ `ಬಿ’ ಅಂಗನವಾಡಿ ಕೇಂದ್ರಕ್ಕೆ ಪ್ರಥಮ ಸ್ಥಾನ ಲಭಿಸಿದೆ.
ಕೊಂಡಜ್ಜಿಯ `ಬಿ’ ಅಂಗನವಾಡಿ ಕೇಂದ್ರಕ್ಕೆ ದ್ವಿತೀಯ ಮತ್ತು ಕೆ. ಬೇವಿನಹಳ್ಳಿಯ `ಎ’ ಅಂಗನ ವಾಡಿ ಕೇಂದ್ರಕ್ಕೆ ತೃತೀಯ ಬಹು ಮಾನ ಸಿಕ್ಕಿದ್ದು, ತಾಲ್ಲೂಕು ಕಛೇರಿ ಯಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯ ಕ್ರಮದಲ್ಲಿ ಈ ಮೂರೂ ಕೇಂದ್ರಗಳ ಕಾರ್ಯಕರ್ತರಾದ ಕೊಮಾರನ ಹಳ್ಳಿಯ ಬಿ.ಜಿ. ಮಂಜುಳಾ, ಕೊಂಡಜ್ಜಿಯ ವನಜಾಕ್ಷಮ್ಮ, ಕೆ. ಬೇವಿ ನಹಳ್ಳಿಯ ಲಲಿತಮ್ಮ ಹಾಗೂ ಸಹಾಯಕಿ ಯರಾದ ಅನಸೂಯಮ್ಮ, ಶಿಲ್ಪ, ಪುಟ್ಟಮ್ಮ ಅವರುಗಳನ್ನು ತಹಶೀಲ್ದಾರ್ ಗುರುಬಸವರಾಜ್ ಸನ್ಮಾನಿಸಿದರು.