ರಾಣೇಬೆನ್ನೂರು, ಅ. 4- ಮಹಾತ್ಮಾಗಾಂಧಿ ಅವರು ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಬೆಳಗಾವಿಯಲ್ಲಿ ಮೊದಲ ಅದಿವೇಶನ ನಡೆಸಿ ನೂರು ವರ್ಷಗಳಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆದೇಶದಂತೆ ಇಲ್ಲಿನ ಶಾಸಕ ಪ್ರಕಾಶ ಕೋಳಿವಾಡ ನೇತೃತ್ವದಲ್ಲಿ ಶತಮಾನೋತ್ಸವ ಆಚರಿಸಲಾಯಿತು.
ಇಲ್ಲಿನ ಕೆಇಬಿ ಗಣೇಶ ದೇವಸ್ಥಾನದಿಂದ ಹೊರಟ ಪಾದಯಾತ್ರೆ ನ್ಯಾಯಾಲಯದ ಆವರಣದಲ್ಲಿರುವ ಸ್ವಾತಂತ್ರ್ಯ ಯೋಧರ ಸ್ಮಾರಕಕ್ಕೆ ಆಗಮಿಸಿ ಗೌರವ ಸಮರ್ಪಿಸಿದರು.
ಶಾಸಕ ಪ್ರಕಾಶ ಕೋಳಿವಾಡ ಜೊತೆ ಕಾಂಗ್ರೆಸ್ ಅಧ್ಯಕ್ಷ ಮಂಜನಗೌಡ ಪಾಟೀಲ, ಶೇರು ಕಾಬೂಲಿ, ಇರ್ಫಾನ್ ದಿಡಗೂರ, ಇಕ್ಬಾಲ್ ರಾಣೇಬೆ ನ್ನೂರು, ಬಸವರಾಜ ಹುಚ್ಚಗೊಂಡರ ಹಾಗೂ ಇತರರು ಭಾಗವಹಿಸಿದ್ದರು.