ಪೋದಾರ್ ಶಾಲೆಯಲ್ಲಿ ಗಾಂಧೀಜಿ, ಶಾಸ್ತ್ರೀಜಿ ಜಯಂತಿ

ಪೋದಾರ್ ಶಾಲೆಯಲ್ಲಿ ಗಾಂಧೀಜಿ,  ಶಾಸ್ತ್ರೀಜಿ ಜಯಂತಿ

ದಾವಣಗೆರೆ, ಅ. 4 – ಪೋದಾರ್ ಪ್ರೆಪ್ ವಿಭಾಗದಲ್ಲಿ  ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಿಸಲಾಯಿತು.

ಮಕ್ಕಳು ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ವೇಷ ಧರಿಸಿ ಅಹಿಂಸಾ ತತ್ತ್ವ ಪರಿಪಾಲನೆ, ಪೌಷ್ಟಿಕ ಆಹಾರದ ಬಳಕೆ, ಪ್ರಾಣಿಗಳ ರಕ್ಷಣಾ ವಿಧಾನ, ಸಮುದ್ರದಲ್ಲಿನ ಜಲಚರಗಳ ರಕ್ಷಣೆ, ಹಾಗು ಖಾದಿ ಬಟ್ಟೆಯ ಬಳಕೆಯಿಂದಾಗುವ ಉಪಯೋಗಗಳ ಬಗ್ಗೆ ಪೋಷಕರಿಗೆ  ಚಟುವಟಿಕೆಗಳನ್ನು ಮಾಡುವುದರ ಮೂಲಕ ಅರಿವು ಮೂಡಿಸಿದರು. 

ಈ ಕಾರ್ಯಕ್ರಮವನ್ನು ಉದ್ದೇಶಿಸಿ  ಮುಖೋಪಾಧ್ಯಾಯಿನಿ  ಮೊನಾಲಿಸ ಸಿಂಗ್‌ ಮಾತನಾಡಿ, ಗಾಂಧಿ ಜಯಂತಿ ಮತ್ತು ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಯಂತಿ ಇದು ಭಾರತದ  ಇತಿಹಾಸದಲ್ಲಿ ಆಳವಾದ ಮಹತ್ವವನ್ನು ಹೊಂದಿದೆ. ಈ ದಿನದಂದು ಅಹಿಂಸೆ, ಸತ್ಯ, ತ್ಯಾಗ ಮತ್ತು ಅಚಲ ಸಂಕಲ್ಪದ ಮೂಲಕ ನಮ್ಮ ದೇಶವನ್ನು ಸ್ವಾತಂತ್ರ್ಯದತ್ತ ಮುನ್ನಡೆಸಿದ ಮಹಾನ್‌ ಚೇತನರಾದ ಗಾಂಧೀಜಿ ಮತ್ತು ಲಾಲ್‌ ಬಹದ್ದೂರ್‌ ಶಾಸ್ತ್ರಿಯವರಿಗೆ ನಾವು ನಮನ ಸಲ್ಲಿಸೋಣ ಎಂದರು. ಆಡಳಿತಾಧಿಕಾರಿ ಚಂದ್ರಕಾಂತ್ ದೇಸಾಯಿ ಉಪಸ್ಥಿತರಿದ್ದರು.

error: Content is protected !!