ಮಲೇಬೆನ್ನೂರು, ಅ.4- ಇಲ್ಲಿನ ಶ್ರೀಮತಿ ಬಸಮ್ಮ ಕೆಂಚಪ್ಪ ಮಡಿವಾಳರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದಿಂದ ದತ್ತು ಪಡೆದಿರುವ ಶಾಲೆಯ ಎಲ್ಲಾ 97 ಮಕ್ಕಳಿಗೆ ಸಮವಸ್ತ್ರ, ಶೂ, ಸಾಕ್ಸ್, ಸ್ಕೂಲ್‌ಬ್ಯಾಗ್‌ಗಳನ್ನು ವಿತರಿಸಿ, ಗಮನ ಸೆಳೆದರು
ಅಲ್ಲದೆ, ಶಾಲೆಯ ಅಭಿವೃದ್ಧಿಗೆ 1 ಲಕ್ಷ ರೂ.ಗಳ ಚೆಕ್ಕನ್ನು ಹಳೇ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷ ಪಿ. ಹೆಚ್. ಶಿವಕುಮಾರ್, ಕಾರ್ಯದರ್ಶಿ ಜಿ. ಬೇವಿನಹಳ್ಳಿಯ ಮಾಜಿ ಗೌಡ್ರ ಶಿವರಾಜ್ ಮತ್ತು ಖಜಾಂಚಿ ಎಂ. ಕೆ. ಗಜೇಂದ್ರಸ್ವಾಮಿ ಅವರು ಶಾಲಾ ಆಡಳಿತ ಮಂಡಳಿಯವರಿಗೆ ವಿತರಿಸಿದರು.
ಇದೇ ವೇಳೆ ಸಣ್ಣ ಸಂಗಾಪುರದ ಮಹೇಶ್ವರಯ್ಯ ಚಾವಡಿ ಅವರು ಶಾಲಾ ಮಕ್ಕಳಿಗೆ ಉಚಿತವಾಗಿ 500 ನೋಟ್‌ಬುಕ್‌ಗಳನ್ನು ನೀಡಿದರು.
ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ವಿಜಯರಾಘವ, ಉಪಾಧ್ಯಕ್ಷ ಡಾ. ಬಿ. ಚಂದ್ರಶೇಖರ್, ಕಾರ್ಯದರ್ಶಿ ಹೆಚ್. ಜಿ. ಚಂದ್ರಶೇಖರ್, ನಿರ್ದೇಶಕರಾದ ಜಿಗಳಿ ಇಂದೂಧರ್, ಎಂ.ಆರ್. ಮಾರಪ್ಪ, ಶಾಂತಮ್ಮ ಎಂ.ಕೆ. ನಾಗರಾಜ್, ಎಸ್‌ಡಿಎಂಸಿ ಅಧ್ಯಕ್ಷ ಸನಾವುಲ್ಲಾ, ಬಸಾಪುರದ ಗದಿಗೆಯ್ಯ, ಶಂಕ್ರಮ್ಮ, ಶಾಲಾ ಮುಖ್ಯ ಶಿಕ್ಷಕ ದಂಡಿ ತಿಪ್ಪೇಸ್ವಾಮಿ, ಶಿಕ್ಷಕರಾದ ಯಂಕಾನಾಯ್ಕ, ಜಿ.ಕೆ. ಬಸವರಾಜಪ್ಪ, ಸಿ. ಹನುಮಂತಪ್ಪ, ಪ್ರೇಮಲೀಲಾ ಬಾಯಿ, ಎಂ.ಕೆ. ಸುನೀಲ್ ಈ ವೇಳೆ ಹಾಜರಿದ್ದರು.