ರಾಣೇಬೆನ್ನೂರು,ಅ.4- ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಕೋಶ ಚಿಕಿತ್ಸೆ ಮಾಡಿಸಿಕೊಂಡು, ವಿವಿಧ ಆರೋಗ್ಯ ಸಮಸ್ಯೆಗಳಿಂದ ನರಳುತ್ತಿದ್ದು, ಸರ್ಕಾರದ ಸಹಾಯ ಧನಕ್ಕಾಗಿ ಕಳೆದೆರಡು ದಿನಗಳಿಂದ ತಹಶೀಲ್ದಾರ್ ಕಛೇರಿ ಎದುರು ಸತ್ಯಾಗ್ರಹ ನಡೆಸುತ್ತಿರುವ ಮಹಿಳೆಯರನ್ನು ಭೇಟಿ ಮಾಡಿದ ಶಾಸಕ ಪ್ರಕಾಶ ಕೋಳಿವಾಡ ಅವರು, ಈಗಾಗಲೇ ಈ ಕುರಿತು ಮುಖ್ಯಮಂತ್ರಿ ಹಾಗೂ ಆರೋಗ್ಯ ಮಂತ್ರಿಗಳ ಜೊತೆ ಮಾತನಾಡಿದ್ದು, ಮತ್ತೆ ಒತ್ತಡ ತರುವುದಾಗಿ ತಿಳಿಸಿದರು.
January 11, 2025