ಮಲೇಬೆನ್ನೂರು, ಅ. 4- ಪಟ್ಟಣದ ಹೊರವಲಯದಲ್ಲಿರುವ ಭದ್ರಕಾಳಿ ಸಮೇತ ವೀರಭದ್ರೇಶ್ವರ ದೇವಸ್ಥಾನದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಮತ್ತು ಲೋಕ ಕಲ್ಯಾಣಾರ್ಥವಾಗಿ 120 ಕ್ಕೂ ಹೆಚ್ಚು ಮಹಿಳೆಯರಿಂದ ಸಾಮೂಹಿಕ ಲಲಿತ ಸಹಸ್ರನಾಮ ಪಾರಾಯಣ ಮಾಡಲಾಯಿತು. ಮಲೇಬೆನ್ನೂರು, ಕುಂಬಳೂರು, ಜಿಗಳಿ, ಹರಿಹರ ಮತ್ತು ಕಮ್ಮಾರಗಟ್ಟಿ ಗ್ರಾಮದಿಂದ ಮಹಿಳೆಯರು ಭಾಗವಹಿಸಿದ್ದರು. ನವದುರ್ಗೆಯರ ಅವತಾರದಲ್ಲಿದ್ದ ಮಕ್ಕಳು ಎಲ್ಲರ ಗಮನ ಸೆಳೆದರು.
January 11, 2025