ಹೊನ್ನಾಳಿ, ಅ. 3 – ತಾಲ್ಲೂಕಿನ ಬೇಲಿಮಲ್ಲೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷರಾಗಿ ಕೋಟೆ ಮಲ್ಲೂರು ಗೀತಮ್ಮ ಮಹೇಶ್ವರಪ್ಪ ಅವಿರೋಧ ಆಯ್ಕೆ ಯಾಗಿರುವು ದಾಗಿ ಚುನಾವಣಾ ಅಧಿಕಾರಿ ಆಗಿರುವ ಸಾಸ್ವೆಹಳ್ಳಿ ಭದ್ರನಾಲಾ ವಿಭಾಗದ ಕಾರ್ಯಪಾಲಕ ಅಭಿಯಂತರ ಪ್ರವೀಣ್ ತಿಳಿಸಿದ್ದಾರೆ. ಬೇಲಿ ಮಲ್ಲೂರು ಜಯಪ್ಪನವರಿಂದ ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು. ಪಂಚಾಯಿತಿ ಅಧ್ಯಕ್ಷರಾದ ಕಮಲಮ್ಮ, ಸದಸ್ಯರಾದ ಮಂಜಮ್ಮ, ಸವಿತಾ, ರತ್ನಮ್ಮ, ನೀಲಮ್ಮ, ಚಂದ್ರಪ್ಪ, ಲಕ್ಷ್ಮಿ, ಪಿ.ಬಿ ಹನುಮಂತಪ್ಪ, ಅಣ್ಣಪ್ಪ, ಕೆ. ಹನುಮಂತಪ್ಪ , ನಾಗರಾಜ್ ಶಾಂತಾಬಾಯಿ, ಪಿ.ಡಿ.ಒ ಪರಮೇಶ್ ಕೊಳ್ಳೂರು ಉಪಸ್ಥಿತರಿದ್ದರು.
January 21, 2025