ರಾಣೇಬೆನ್ನೂರು, ಅ. 3 – ದ ಲೆಜೆಂಡ್ ಆಫ್ ಮೌಲಾ ಜಟ್ ಭಾರತದ ವಿರುದ್ದ ಅಘೋಷಿತ ಯುದ್ಧ ಸಾರಿ ಸಾವಿರಾರು ಸೈನಿಕರು, ನಿರಪರಾಧಿ ಭಾರತೀಯರನ್ನ ಕೊಲ್ಲುವ ಮಾಹಿರ ಖಾನ್, ಹುಮೈಮಾ ಮಲ್ಲಿಕ್, ಪರಿಶ್ ಶಫಿ ಮುಂತಾದ ಪಾಕಿಸ್ತಾನಿ ಕಲಾವಿದರು ನಟಿಸಿರುವ ಚಲನಚಿತ್ರವನ್ನು ಭಾರತದಲ್ಲಿ ಪ್ರದರ್ಶಿಸಲು ಅವಕಾಶ ನೀಡದಂತೆ ತಡೆಯಬೇಕು ಎಂದು ಹಿಂದೂ ಜನ ಜಾಗೃತಿ ಸಮೀತಿ ಒತ್ತಾಯಿಸಿದೆ. ಭಾರತದ ಅನೇಕ ಕಲಾವಿದರ ಚಲನಚಿತ್ರಗಳ ಪ್ರದರ್ಶನಕ್ಕೆ ಪಾಕಿಸ್ತಾನದಲ್ಲಿ ಅವಕಾಶ ಕಲ್ಪಿಸದ ಪರಿಸ್ಥಿತಿ ಇದ್ದು, ಹಿಂದೂಗಳನ್ನ ಕೊಲೆ ಮಾಡುವ ಚಲನಚಿತ್ರಕ್ಕೆ ಭಾರತದಲ್ಲಿ ಅವಕಾಶ ಕೊಡುವದು ಹಿಂದೂಗಳ ಮೇಲೆ ಮಾನಸಿಕ ದೌರ್ಜನ್ಯ ಎಸಗಿದಂತೆ ಆಗಿದ್ದು ಕೇಂದ್ರ ಗೃಹ ಮಂತ್ರಿಗಳು ಇದನ್ನ ತಡೆಯಬೇಕು ಸಮೀತಿಯ ಜಿ.ಜಿ. ಹೊಟ್ಟಿಗೌಡ್ರ, ಜಟ್ಟೆಪ್ಪ ಕರೇಗೌಡ, ಹನುಮಂತಪ್ಪ ಕಬ್ಬಾರ ಮತ್ತಿತರರು ತಹಶೀಲ್ದಾರಿಗೆ ಮನವಿ ಅರ್ಪಿಸಿದರು.
January 11, 2025