ಸರ್ಕಾರ ಪತನಗೊಳಿಸುವ ಯತ್ನಕ್ಕೆ ಹಂಪ ನಾಗರಾಜಯ್ಯ ಟೀಕೆ

ಸರ್ಕಾರ ಪತನಗೊಳಿಸುವ ಯತ್ನಕ್ಕೆ ಹಂಪ ನಾಗರಾಜಯ್ಯ ಟೀಕೆ

ಮೈಸೂರು, ಅ. 3 – ಚುನಾಯಿತ ಸರ್ಕಾರದ ಅವಧಿ ಮುಗಿಯುವ ಮೊದಲೇ ಪತನಗೊಳಿಸುವ ಯತ್ನವನ್ನು ಟೀಕಿಸಿರುವ ಸಾಹಿತಿ ಹಂಪಾ ನಾಗರಾಜಯ್ಯ, ಪ್ರತಿಪಕ್ಷಗಳು ಜನರ ವಿಶ್ವಾಸ ಗೆದ್ದು, ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಬೇಕು ಎಂದರು.

ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಿ, ನಾಡಹಬ್ಬ ದಸರಾಗೆ ಚಾಲನೆ ನೀಡಿದ ಬಳಿಕ ಅವರು ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರ್ಕಾರಗಳನ್ನು ಉರುಳಿಸುವ ದುರಾಲೋಚನೆ ಬರದಂತೆ ತಡೆದು, ಚುನಾಯಿತ ಸರ್ಕಾರಗಳನ್ನು ಉಳಿಸುವ ಚಿಂತನೆಗಳನ್ನು ಮೂಡಿಸಲೆಂದು ಬೇಡು ತ್ತೇನೆ ಎಂದು ಹೇಳಿದರು.  ಮೊದಲೇ ದೊಡ್ಡ ಹೊರೆ ಗಳಿಂದ ಬಳಲಿ ಬಸವಳಿದಿರುವ ಶ್ರೀಸಾಮಾನ್ಯರ ಹೆಗಲಿಗೆ ಮತ್ತೆ ಮತ್ತೆ ನಡೆಯುವ ಚುನಾವಣೆಗಳು ಇನ್ನಷ್ಟು ಭಾರ ಹೇರಿದರೆ ಕುಸಿಯುತ್ತಾನಷ್ಟೆ ಎಂದು ನಾಗರಾಜಯ್ಯ ಹೇಳಿದರು. ಯಾವುದೇ ಸರ್ಕಾರ ಶಾಶ್ವತವಾಗಿ ಅಧಿಕಾರದಲ್ಲಿ ಇರುವುದಿಲ್ಲ. ಈಗ ಪರಾಭವಗೊಂಡಿರುವ ಪಕ್ಷ ಜನರ ವಿಶ್ವಾಸ ಪಡೆದು ನಂತರ ಅಧಿಕಾರಕ್ಕೆ ಬರಬೇಕು. ಇದಕ್ಕೆ ಸಿದ್ಧಗೊಳ್ಳಲು ಐದು ವರ್ಷದ ಅವಧಿಯನ್ನು ಬಳಸಬಹುದು ಎಂದವರು ಹೇಳಿದರು.

ದಸರಾ ಉತ್ಸವದಲ್ಲಿ ಹಂ.ಪಾ. ನಾಗರಾಜಯ್ಯ ಅವರಿಗೆ ಗೌರವ : ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದಸರಾ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಡೋಜ ಡಾ. ಹಂ. ಪಾ. ನಾಗರಾಜಯ್ಯ ಅವರನ್ನು ಸನ್ಮಾನಿಸಿದರು.

error: Content is protected !!