ಭಜನೆ ಮೂಲಕ ಗಾಂಧಿ ಜಯಂತಿ ಆಚರಿಸಿ ಗಮನ ಸೆಳೆದ ಉಪ ತಹಶೀಲ್ದಾರ್

ಭಜನೆ ಮೂಲಕ ಗಾಂಧಿ ಜಯಂತಿ ಆಚರಿಸಿ ಗಮನ ಸೆಳೆದ ಉಪ ತಹಶೀಲ್ದಾರ್

ಮಲೇಬೆನ್ನೂರು, ಅ. 3- ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸರಳತೆಯಂತೆ ಮತ್ತು ಅವರಿಗೆ ಇಷ್ಟವಾದ ಭಜನೆ ಕಾರ್ಯಕ್ರಮದ ಮೂಲಕ ಅವರ ಜಯಂತಿ ಆಚರಿಸುವ ಮೂಲಕ ಉಪ ತಹಶೀಲ್ದಾರ್ ಆರ್. ರವಿ ಎಲ್ಲರ ಗಮನ ಸೆಳೆದರು.

ಇಲ್ಲಿನ ನಾಡ ಕಛೇರಿಯಲ್ಲಿ ಬುಧವಾರ ಗಾಂಧೀಜಿ ಮತ್ತು ಶಾಸ್ತ್ರೀಜಿ ಅವರ ಜಯಂತಿ ಕಾರ್ಯಕ್ರಮವನ್ನು ಎಲ್ಲರೂ ನೆಲದ ಮೇಲೆ ಕುಳಿತು ಸಾಮೂಹಿಕ ಭಜನೆ ಮಾಡುವ ಮೂಲಕ ಆಚರಿಸಲಾಯಿತು.

ಆಶ್ರಯ ಕಾಲೋನಿಯ ಟಿ. ಗಜೇಂದ್ರಪ್ಪ ಅವರು ರಘುಪತಿ ರಾಘವ ರಾಜಾರಾಂ, ಪತಿತ ಪಾವನ ಸೀತಾರಾಮ್ ಸೇರಿದಂತೆ ಗಾಂಧೀಜಿ ಕುರಿತಾದ ಇತರೆ ಹಾಡುಗಳನ್ನು ಭಜನೆ ಮಾಡುತ್ತಾ ಹಾಡಿದರು.  ಇವರಿಗೆ ಪುರಸಭೆ ಸದಸ್ಯ ಗೌಡ್ರ ಮಂಜಣ್ಣ, ಉಪ ತಹಶೀಲ್ದಾರ್ ಆರ್. ರವಿ, ಕಂದಾಯ ನಿರೀಕ್ಷಕ ಆನಂದ್, ಪತ್ರಕರ್ತರಾದ ನಟರಾಜ್, ಪ್ರಕಾಶ್, ರಮೇಶ್, ಸದಾನಂದ್, ಕಛೇರಿ ಸಿಬ್ಬಂದಿಗಳಾದ ರಾಣಿ ಎಲಿಜೆಬತ್, ಬಸವರಾಜ್, ಶಿಲ್ಪಾ, ಗ್ರಾಮ ಸಹಯಕರಾದ ಜಿಗಳಿ ರಂಗಸ್ವಾಮಿ, ಹಾಲಿವಾಣದ ಸಂತೋಷ್, ಕುಂಬಳೂರಿನ ಮಾರುತಿ, ಪೋಸ್ಟ್ ಮಾರುತಿ, ಜೈ ಮಾರುತಿ ಮತ್ತಿತರರು ಸಾಥ್ ನೀಡಿದರು.

error: Content is protected !!