ದಿನನಿತ್ಯದ ಚಟುವಟಿಕೆ, ಉತ್ತಮ ಆಹಾರದಿಂದ ಆರೋಗ್ಯ

ದಿನನಿತ್ಯದ ಚಟುವಟಿಕೆ, ಉತ್ತಮ ಆಹಾರದಿಂದ ಆರೋಗ್ಯ

ಹಲವಾಗಲು ಗ್ರಾಮದಲ್ಲಿನ ಉಚಿತ ಆರೋಗ್ಯ ಶಿಬಿರದಲ್ಲಿ ಲಕ್ಷ್ಮಿದೇವಿ ಅಣ್ಣಪ್ಪ

ಹರಪನಹಳ್ಳಿ, ಅ. 3- ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಂಡು,  ದಿನನಿತ್ಯ ಒಂದಿಲ್ಲೊಂದು ಚಟುವಟಿಕೆ ಯಲ್ಲಿ ತೊಡಗಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಯೋಗನರಸಿಂಹ ಸೌಹಾರ್ದ ಪತ್ತಿನ ಸಹಕಾರಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕರಾದ ವೈ. ಎ. ಲಕ್ಷ್ಮಿದೇವಿ ಅಣ್ಣಪ್ಪ ಹೇಳಿದರು.

ಹಲವಾಗಲು ಗ್ರಾಮದಲ್ಲಿ ತಾಲ್ಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ವೈ. ಡಿ. ಅಣ್ಣಪ್ಪ, ಹಲವಾಗಲು ಗ್ರಾಮದ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಂಘ, ಲಕ್ಷ್ಮೀ ಸರ್ಜಿಕಲ್ ಟ್ರಾಮಾ ಆರ್ಥೋ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ (ರಾಣೇಬೆನ್ನೂರು) ಇವರ ಸಂಯುಕ್ತಾಶ್ರಯದಲ್ಲಿ  ಹಮ್ಮಿಕೊಳ್ಳಲಾಗಿದ್ದ  ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.   

ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಈ ಆರೋಗ್ಯ ಶಿಬಿರ ಏರ್ಪಡಿಸಲಾಗಿದೆ. ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಂಡು ಸಾಧ್ಯವಾದಷ್ಟು ಜೀವನ ಶೈಲಿ ಬದಲಾವಣೆ ಮಾಡಿಕೊಳ್ಳುವುದು ಉತ್ತಮ ಎಂದರು.

ವೈ.ಎ.ಚಂದನ ಅಣ್ಣಪ್ಪ ಮಾತನಾಡಿ, ಸಮಾಜ ನಮಗೆ ಏನು ಮಾಡಿದೆ ಅನ್ನುವುದಕ್ಕಿಂತ ಮುಖ್ಯವಾಗಿ ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂದು ಆಲೋಚಿಸ ಬೇಕು.  ಈ ನಿಟ್ಟಿನಲ್ಲಿ   ಇಂದು ಹಮ್ಮಿಕೊಂಡಿರುವ ಉಚಿತ ಆರೋಗ್ಯ ಶಿಬಿರಗಳಿಂದ ಬಡವರ, ಹಿಂದುಳಿದ ಹಾಗೂ ನಿರಾಶ್ರಿತರಿಗೆ ತುಂಬಾ ಅನುಕೂಲವಾಗುತ್ತದೆ ಎಂದು ಹೇಳಿದರು.

ಡಾ. ಸಂಜೀವ್ ಎಂ.ಮುದ್ರಿ ಮಾತನಾಡಿ, ಆರೋಗ್ಯವೇ ಮಹಾಭಾಗ್ಯ, ಸರ್ಕಾರ ಆಯುಷ್ಮಾನ್ ಭಾರತ್ ಕಾರ್ಡ್, ಯಶಸ್ವಿನಿ ಹಾಗೂ ಕೆಲವೊಂದು ಯೋಜನೆಗಳ ಸೌಲಭ್ಯ ಒದಗಿಸಿದೆ ಎಂದು ಹೇಳಿದರು.

ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ  ಬಿಳಿಚೋಡು ಗುಡ್ಡಪ್ಪ ಮಾತನಾಡಿ, ಯಶಸ್ವಿನಿ ಕಾರ್ಡ್ ಮಾಡಿಸಿದವರಿಗೆ ವಿವಿಧ ಸೌಲಭ್ಯಗಳು ಸಿಗುತ್ತವೆ.  ಎಕ್ಸ್ ರೇ, ಸ್ಕ್ಯಾನಿಂಗ್ ಉಚಿತವಾಗಿ ಸಿಗಲಿದೆ. ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಹೇಳಿದರು.    

 ವಾಲ್ಮೀಕಿ ನಾಯಕ ಸಮಾಜದ ಮಾಜಿ ಅಧ್ಯಕ್ಷ ಹೆಚ್.ಟಿ.ಗಿರೀಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ  ಭೋವಿ ಸರಿತಾ ರಮೇಶ್, ಉಪಾಧ್ಯಕ್ಷ  ಎಂ. ನಾಗರಾಜ್, ಗ್ರಾ.ಪಂ. ಸದಸ್ಯೆ ರತ್ನಮ್ಮ ಜಯಣ್ಣ, ದಿವಾಕರ್, ಗ್ರಾಮದ ಮುಖಂಡರಾದ ಮಿಂಚು, ಪ್ರೀತಮ್, ಮತ್ತೂರು ಪ್ರಕಾಶ್, ಮಡಿವಾಳ ಬಸವರಾಜ್,  ಎ.ಈಶಪ್ಪ, ಕಾರ್ಯನಿರ್ವಾಹಕ ಮಲ್ಲಿಕಾರ್ಜುನ್‌ ಸೇರಿದಂತೆ ಇತರರು ಇದ್ದರು.  

error: Content is protected !!