ಜಗಳೂರು; ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಮಕ್ಕಳ ಸಾವು: ಶಾಸಕ ಬಿ.ದೇವೇಂದ್ರಪ್ಪ ಸಾಂತ್ವನ

ಜಗಳೂರು; ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಮಕ್ಕಳ ಸಾವು: ಶಾಸಕ ಬಿ.ದೇವೇಂದ್ರಪ್ಪ ಸಾಂತ್ವನ

ಜಗಳೂರು, ಅ.1- ತಾಲ್ಲೂಕಿನ ಅಸಗೋಡು ವಡ್ಡರಹಟ್ಟಿ ಗ್ರಾಮದ ಜಮೀನಿನಲ್ಲಿನ  ಕೃಷಿ ಹೊಂಡದಲ್ಲಿ ಮುಳುಗಿ ಗಂಗೋತ್ರಿ (10), ತನುಶ್ರೀ (11) ಇಬ್ಬರು ಬಾಲಕಿಯರು  ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.

ಗ್ರಾಮಕ್ಕೆ ಇಂದು ಭೇಟಿ ನೀಡಿದ ಶಾಸಕ ಬಿ.ದೇವೇಂದ್ರಪ್ಪ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ, ವೈಯಕ್ತಿಕವಾಗಿ ತಲಾ 20 ಸಾವಿರ ರೂ. ನೆರವು ನೀಡಿದರು. 

ಮೃತರ ಕುಟುಂಬಕ್ಕೆ ಸರ್ಕಾರದಿಂದ ಸಿಗುವ ಪರಿಹಾರವನ್ನು ಅಧಿಕಾರಿಗಳು ತಕ್ಷಣವೇ ಕ್ರಮವಹಿಸಿ  ಸಕಾಲದಲ್ಲಿ ಒದಗಿಸಲು ಸೂಚಿಸಿದರು.

ಅತಿವೃಷ್ಠಿಯಿಂದ ಕೆರೆ, ಕಟ್ಟೆಗಳು ಮೈದುಂಬಿ ಹರಿಯುತ್ತಿವೆ. ಸಾರ್ವಜನಿಕರು ಜಾಗೃತರಾಗಿ ಕೆರೆಕಟ್ಟೆಗಳಿಂದ ದೂರವಿರಬೇಕು. ಮಕ್ಕಳ ಬಗ್ಗೆ  ಪೋಷಕರು ಕಾಳಜಿವಹಿಸಬೇಕು ಎಂದರು.

ತಾಲ್ಲೂಕಿನಲ್ಲಿ  ಉದ್ಯೋಗ ಅರಸಿ ಕಾಫಿ ನಾಡಿಗೆ ಗುಳೇ ಹೋಗುವ ಮಾಹಿತಿ ಕೇಳಿಬಂದಿವೆ. ಅಧಿಕಾರಿಗಳು ಗುಳೇ ಹೋಗುವುದನ್ನು ತಡೆಗಟ್ಟಬೇಕು. ಪಿಡಿಓಗಳು ಸ್ಥಳೀಯವಾಗಿ ಮನರೇಗಾ ಕೆಲಸ ಕೊಡಿ. ಅಂತೆಯೇ ವಡ್ಡರಹಟ್ಟಿ ಮಾರ್ಗದ ರಸ್ತೆಬದಿಯಲ್ಲಿ ಬೆಳೆದಿರುವ ಗಿಡಗಳನ್ನು, ಜಂಗಲ್ ಕಟ್ಟಿಂಗ್ ಕಾಮಗಾರಿ ಕೈಗೊಳ್ಳಬೇಕು. ಬಸ್ ಸಂಪರ್ಕವಿಲ್ಲದ ಕುಗ್ರಾಮಗಳಿಂದ ಪಕ್ಕದ ಗ್ರಾಮಗಳಿಗೆ  ಸಂಚರಿಸಲು ಅವಕಾಶ ಮಾಡಿಕೊಡಿ ಎಂದು ಪಿಡಿಓ ಗೆ ಸೂಚನೆ ನೀಡಿದರು. 

ತಹಶೀಲ್ದಾರ್ ಸೈಯ್ಯದ್ ಕಲೀಂ ಉಲ್ಲಾ ಮಾತನಾಡಿ, ಮೃತ ಬಾಲಕಿಯರಿಗೆ ಮುಖ್ಯಮಂತ್ರಿ ತುರ್ತು ಪರಿಹಾರ ನಿಧಿಯಡಿ ಪರಿಹಾರ ಸಿಗಲಿದೆ ಹಾಗೂ ಶಿಕ್ಷಣ ಇಲಾಖೆ ಮಕ್ಕಳ ಕ್ಷೇಮಾಭಿವೃದ್ದಿ ನಿಧಿಯಿಂದ 1 ಲಕ್ಷ ರೂ. ಪರಿಹಾರ ದೊರೆಯಲಿದೆ  ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಬಿಇಓ ಹಾಲಮೂರ್ತಿ, ಕೃಷಿ ಇಲಾಖೆ ಸಹಾಯಕ‌ ನಿರ್ದೇಶಕಿ ಶ್ವೇತಾ, ಆರ್.ಐ. ಧನಂಜಯ್, ಡಿಟಿಓ ರೂಪ, ಪಿಡಿಓ ಮರುಳಸಿದ್ದಪ್ಪ, ಬಿ.ಆರ್.ಸಿ ಡಿಡಿ ಹಾಲಪ್ಪ, ಪಿಎಸ್‌ಐ ಸೋಮಶೇಖರ್, ಮುಖಂಡರಾದ ಬಿ.ಆರ್. ಅಂಜಿನಪ್ಪ, ಡಿ.ಶ್ರೀನಿವಾಸ್,  ರವಿಕುಮಾರ್, ಶಂಕ್ರಪ್ಪ, ಬಿ.ಮಹೇಶ್ವರಪ್ಪ, ಆಜಾಮುಲ್ಲಾ ಇದ್ದರು.

error: Content is protected !!