ತಾಲ್ಲೂಕು ಕಸಾಪದಿಂದ ಇಂದು ಎಲೆಬೇತೂರಿನಲ್ಲಿ ದತ್ತಿ ಉಪನ್ಯಾಸ

ತಾಲ್ಲೂಕು ಕಸಾಪದಿಂದ ಇಂದು ಎಲೆಬೇತೂರಿನಲ್ಲಿ ದತ್ತಿ ಉಪನ್ಯಾಸ

ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಮತ್ತು ಎಲೆಬೇತೂರಿನ ಶ್ರೀ ಕೊಂಡಜ್ಜಿ ಬಸಪ್ಪ ಪ್ರೌಢಶಾಲೆ ಹಾಗೂ ಶ್ರೀ ತರಳಬಾಳು ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ಹಿರಿಯ ನಾಗರಿಕರ ಸಹಾಯವಾಣಿ (ದಾವಣಗೆರೆ) ಇವರ ಸಹಯೋಗದಲ್ಲಿ ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಇಂದು ಬೆಳಿಗ್ಗೆ 9.30ಕ್ಕೆ ಎಲೆಬೇ ತೂರಿನ ಶ್ರೀ ಕೊಂಡಜ್ಜಿ ಬಸಪ್ಪ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಅಧ್ಯಕ್ಷ ಎಂ. ಬಸವರಾಜಪ್ಪ ವಹಿಸಲಿದ್ದು, ಮುಖ್ಯ ಶಿಕ್ಷಕಿ ಎಂ.ಬಿ. ಪ್ರೇಮ ಉದ್ಘಾಟಸಲಿದ್ದಾರೆ. ನಾಟಕ ಅಕಾಡೆಮಿ ಪ್ರಶಸ್ತ ಪುರಸ್ಕೃತ ಹೆಚ್‌.ಎಸ್‌. ದ್ಯಾಮೇಶ್‌ ಜನಪದರ ಜೀವನ ಮೌಲ್ಯಗಳು ವಿಷಯದ ಕುರಿತು ಉಪನ್ಯಾಸ ನೀಡುವರು. 

ಮುಖ್ಯ ಅತಿಥಿಗಳಾಗಿ ಸುಮತಿ ಜಯಪ್ಪ, ಹೆಚ್‌. ಬಸವರಾಜಪ್ಪ, ಬಿ.ಎಂ. ಶಶಿಕಲಾ, ಬಿ. ವಿರೂಪಾಕ್ಷಪ್ಪ,  ಹೆಚ್‌.ಎಸ್‌. ದ್ಯಾಮೇಶ್‌ ಮತ್ತು ರಾಘವೇಂದ್ರ ನಾಯರಿ ಅವರನ್ನು ಸನ್ಮಾನಿಸಲಾಗುವುದು. ಷಡಾಕ್ಷರಪ್ಪ ಎಂ. ಬೇತೂರು ಪ್ರಾಸ್ತಾವಿಕ ನುಡಿಗಳನ್ನಾಡುವರು.

error: Content is protected !!